ಮಂಡ್ಯ: ಸ್ವಗ್ರಾಮ ಪಾಂಡವಪುರ ತಾಲೂಕಿನ ಚಿನಕುರಳಿಯ ಮತಗಟ್ಟೆ ಸಂಖ್ಯೆ138 ರಲ್ಲಿ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ.
ಚಿನಕುರುಳಿ ಗ್ರಾಮ ಸರ್ಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತದಾನದ ಬಳಿಕ ಮಾತನಾಡಿದ ಸಿ.ಎಸ್.ಪುಟ್ಟರಾಜು, ಕುಮಾರಸ್ವಾಮಿಯವರನ್ನು ಪ್ರಚಂಡ ಬಹುಮತದಿಂದ ಈ ಜಿಲ್ಲೆಯ ಜನ ಗೆಲ್ಲಿಸ್ತಾರೆ. ಈ ಜಿಲ್ಲೆಯ ಸ್ವಾಭಿಮಾನ ಜನ ಈಗಾಗಲೇ ಗೆಲ್ಲಿಸುವ ನಿರ್ಧಾರ ಮಾಡಿದ್ದಾರೆ ಎಂದರು.
ಕುಮಾರಸ್ವಾಮಿಯವರು ಸಿ.ಎಂ. ಆಗಿದ್ದಾಗ ಈ ಜಿಲ್ಲೆಯ ರೈತರು ಸೇರಿ ಜನಸಾಮಾನ್ಯರು ಹಾಗು ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಹಾಗಾಗಿ ಕುಮಾರಸ್ವಾಮಿಯವರನ್ನು ಈ ಜಿಲ್ಲೆಯ ಜನರು ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಹೇಳಿದರು.