ಮಂಡ್ಯ: ಮದ್ದೂರಿನ ಮತಗಟ್ಟೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ ನೀಡಿದ್ದು, ಜನರ ಮತದಾನ ವೀಕ್ಷಣೆ ಮಾಡಿ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ.
ಮದ್ದೂರು ಪಟ್ಟಣದ ಮತಗಟ್ಟೆ 109 ಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ.
ಈ ವೇಳೆ ಮಾತನಾಡಿದ ಸ್ಟಾರ್ ಚಂದ್ರು, ಈ ಬಾರಿ ಜನರ ಸೇವೆಗೆ ಜಿಲ್ಲೆಯ ಮತದಾರರಿಗೆ ಒಂದು ಅವಕಾಶ ಕೇಳಿದ್ದೀನಿ.ಕಳೆದ ಎರಡು ತಿಂಗಳಿನಿಂದ ಸತತವಾಗಿ ಕ್ಷೇತ್ರದಲ್ಲಿ ಓಡಾಡಿ ಜನರ ಸೇವೆಗೆ ಮತ ಕೇಳಿದ್ದೀನಿ. ಜಿಲ್ಲೆಯ ಜನರು ಕೈ ಹಿಡಿದು ಗೆಲ್ಲಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.