ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕೆಇಎ ಅಧಿಸೂಚನೆ ಪ್ರಕಟಿಸಿದೆ.
ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು : 23
ಮೇಲ್ವಿಚಾರಕರು : 23
ಪದವೀಧರ ಗುಮಾಸ್ತರು : 6
ಗುಮಾಸ್ತರು : 14
ಲೆಕ್ಕಗುಮಾಸ್ತರು : 06
ಸೇಲ್ಸ್ ಇಂಜಿನಿಯರ್ : 04
ಸೇಲ್ಸ್ ಮೇಲ್ವಿಚಾರಕರು: 19
ಮಾರಾಟ ಪ್ರತಿನಿಧಿ : 6
ಹುದ್ದೆವಾರು ವಿದ್ಯಾರ್ಹತೆ
ಸಹಾಯಕ ವ್ಯವಸ್ಥಾಪಕರು : ಎಂಬಿಎ, ಡಿಪ್ಲೊಮ ಇನ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ / ಹುದ್ದೆಗೆ ಸಂಬಂಧಿತ ಡಿಗ್ರಿ ಜತೆಗೆ ಜತೆಗೆ ಎರಡು ವರ್ಷ ಕಾರ್ಯಾನುಭವ.
ಮೇಲ್ವಿಚಾರಕರು : ಪದವಿ.
ಪದವೀಧರ ಗುಮಾಸ್ತರು : ಬಿ.ಕಾಂ / ಬಿಬಿಎ / ಎಕನಾಮಿಕ್ಸ್ ಡಿಗ್ರಿ.
ಗುಮಾಸ್ತರು : ಪದವಿ.
ಲೆಕ್ಕಗುಮಾಸ್ತರು : ಪದವಿ.
ಸೇಲ್ಸ್ ಇಂಜಿನಿಯರ್ : ಡಿಪ್ಲೊಮ.
ಸೇಲ್ಸ್ ಮೇಲ್ವಿಚಾರಕರು: ಪದವಿ ಜತೆಗೆ 5 ವರ್ಷ ಕಾರ್ಯಾನುಭವ.
ಮಾರಾಟ ಪ್ರತಿನಿಧಿ : ಪದವಿ ಜತೆಗೆ 5 ವರ್ಷ ಕಾರ್ಯಾನುಭವ.
ವಯಸ್ಸಿನ ಅರ್ಹತೆ
ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ.
ಎಸ್ಸಿ/ ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಶುಲ್ಕ ವಿವರ
ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ.1000.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್ ಸಿ/ ಎಸ್ ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250.
ಆಯ್ಕೆ ವಿಧಾನ ಹೇಗೆ?
ಈ ಮೇಲಿನ ಪ್ರತಿ ಹುದ್ದೆಗೆ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧಾರವಾಡ, ಬೆಳಗಾವಿ, ಕಲಬುರ್ಗಿ, ಬಿಜಾಪುರ, ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುವುದು.
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ : 22-06-2023
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 23-06-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-07-2023 ರ ಸಂಜೆ 05-30 ಗಂಟೆವರೆಗೆ.
ಇ-ಅಂಚೆ ಕಛೇರಿಗಳಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 25-07-2023