ನಾಗಮಂಗಲ: ಮತದಾನ ಕಾಂಗ್ರೆಸ್ ಪರ ಇದೆ. ಕಾಂಗ್ರೆಸ್ ಪರವಾಗಿ ಮಹಿಳೆಯರ ಮತ ಹೆಚ್ಚಿದೆ ನಮಗೆ ಪಾಸಿಟಿವಾಗಿ ಕಾಣ್ತಿದೆ. 100 ರಷ್ಟು ನಾವೇ ಗೆಲ್ತೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಾಗಮಂಗಲದ ಇಜ್ಜಲಘಟ್ಟ ಗ್ರಾಮದಲ್ಲಿ ಮಾತನಾಡಿದ ಅವರು, ಅಂತರ ಡಿಸೈಡ್ ಮಾಡೋದು ಜನರು ಎಲ್ಲಾ ಅವರಿಗೆ ಬಿಟ್ಟಿದ್ದು. ಓಪನ್ ಆಗಿ ಡಿಸೈಡ್ ಮಾಡಿ ಕಾಂಗ್ರೆಸ್ ಗೆಲ್ಲಿಸುವ ಬಗ್ಗೆ ಜನಾಭಿಪ್ರಾಯ ಇದೆ. ಕಾಂಗ್ರೆಸ್ ಗ್ಯಾರಂಟಿ ಮೇಲೆ ಜನರು ವಿಶ್ವಾಸ ಇದೆ. ಕುಮಾರಸ್ವಾಮಿ ಗ್ಯಾರಂಟಿ ನಿಲ್ಲಿಸುವ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿ ಕೊಡುವುದು ತಪ್ಪು, ಮಹಿಳೆಯರು ದಾರಿ ತಪ್ಪಿದ್ದಾರೆ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲೆಗೆ ಒಂದು ಶಾಶ್ವತ ಯೋಜನೆ ಕೊಟ್ಟಿಲ್ಲ. ಅವರ ತಂದೆ ಕೂಡ ಸಿಎಂ, ಅವರು ಸಿಎಂ ಆಗಿದ್ರೂ ಏನು ಮಾಡಿಲ್ಲ. ಹಾಸನ ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ, ಮಂಡ್ಯ, ತುಮಕೂರಿನ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡುತ್ತಾರೆ ಅಷ್ಟೆ. ವಯಕ್ತಿಕವಾಗಿ ಕುಮಾರಸ್ವಾಮಿ ಕೊಡುಗೆ ಮಂಡ್ಯ ಜಿಲ್ಲೆಗೆ ಶೂನ್ಯ ಎಂದು ಹರಿಹಾಯ್ದರು.
ಒಕ್ಕಲಿಗರ ನಾಯಕ ನಾನೇ ಅಂತ ಹೇಳ್ಕೋಳ್ತಾರೆ ಏನು ಮಾಡಿಲ್ಲ. ಪುಟ್ಟರಾಜು ಕುಮಾರಸ್ವಾಮಿ ಹೇಳಿದಾಗೆ ಕೇಳ್ತಾರೆ, ಕುಮಾರಸ್ವಾಮಿ ದೇವೇಗೌಡ್ರು ಹೇಳಿದಾಗೆ ಕೇಳ್ತಾರೆ. ಇವರು ನೀರಾವರಿ ಯೋಜನೆಗೆ ಒತ್ತು ಕೊಟ್ಟಿಲ್ಲ. ನಾವು ಕೃಷಿ ವಿವಿ ಮಾಡಿದ್ದೇವೆ. ಮೆಡಿಕಲ್ ಕಾಲೇಜು ಮಾಡಿದ್ವಿ. ಕುಮಾರಸ್ವಾಮಿ ಕಾವೇರಿ ಸಮಸ್ಯೆ ಸರಿಪಡಿಸುತ್ತೇನೆ ಅಂತಾರೆ ಕುಮಾರಸ್ವಾಮಿ ಬಗ್ಗೆ ಬೇಸರ ಆಗುತ್ತೆ. ಕುಮಾರಸ್ವಾಮಿ ಇಷ್ಟೊಂದು ಸುಳ್ಳು ಹೇಳ್ತಾರೆ ಅಂತ ಬೇಸರ ಆಗುತ್ತೆ ಎಂದು ಹೇಳಿದರು.
ಕಾವೇರಿ ವಿಷಯದಲ್ಲಿ ದೇವೇಗೌಡ್ರು ಅವರ ಪ್ರಯತ್ನ ಅವರು ಮಾಡಿದ್ದಾರೆ ನ್ಯಾಯ ಸಿಕ್ಕಿಲ್ಲ. ಎಲ್ಲಾ ಮುಗಿದು ಟ್ರಿಬಿನಲ್ ಆಗಿದೆ ಕಾನೂನು ವ್ಯಾಪ್ತಿಯಲ್ಲಿ ಇದೆ. ಈಗ ನಾನು ಸಂಸದನಾಗಿ ಮಾಡ್ತೇನೆ ಅಂದ್ರೆ ಅರ್ಥ ಏನು? ಮಾಜಿ ಮುಖ್ಯಮಂತ್ರಿಯಾದವರು ಯಾಕೆ ಸುಳ್ಳು ಹೇಳಬೇಕು? ಗ್ಯಾರಂಟಿ, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡ್ತಾರೆ. ಸುಮಲತಾ ಬಗ್ಗೆ ಲಘುವಾಗಿ ಮಾತನಾಡ್ತಾರೆ ಎಂದು ಕಿಡಿಕಾರಿದರು.
ಹಾಸನ ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿ, ಅದು ಅವರ ವಯಕ್ತಿಕ ವಿಚಾರ, ದೊಡ್ಡ ಕುಟುಂಬ ನಾನು ಮಾತನಾಡಿದ್ರೆ ಚೆನ್ನಾಗಿರಲ್ಲ. ದೇಶದ ಪ್ರಧಾನಿ, ಮುಖ್ಯಮಂತ್ರಿ, ಅವರು ಬಿಟ್ಟು ಅವರ ಮಕ್ಕಳಿಗು ಸ್ಥಾನ ಕೊಟ್ಟಿದ್ದಾರೆ. ಇದರ ಬಗ್ಗೆ ನಾನು ಟೀಕೆ ಮಾಡಲ್ಲ. ವೈಯಕ್ತಿಕ ಜೀವನದಲ್ಲಿ ಒಂದಷ್ಟು ತಪ್ಪು ನಡೆಯುತ್ತೆ ಅವರಿಗೆ ಬಿಟ್ಟ ವಿಚಾರ. ಆದ್ರೆ ಒತ್ತಾಯಪೂರ್ವಕವಾಗಿ ತೊಂದರೆ ಕೊಡೊದು ಸರಿಯಲ್ಲ. ಇದಕ್ಕೆಲ್ಲ ಅವರ ಕುಟುಂಬವೇ ಉತ್ತರ ಕೊಡಬೇಕು ಎಂದರು.
ದೇವೇಗೌಡ್ರುಗೆ ರಾಜಕೀಯದಲ್ಲಿ ಅವರದೇ ಅದ ಗೌರವ ಇದೆ ಈ ವಿಚಾರಕ್ಕೆ ಅವರನ್ನು ಎಳೆಯಲ್ಲ. ಅವರ ಕುಟುಂಬದ ಯಾವುದೇ ವಿಚಾರ ಇದ್ರು ಕುಮಾರಸ್ವಾಮಿ ಅವರೇ ಹೊಣೆ ಹೊರಬೇಕು. ಅದು ಎಷ್ಟರ ಮಟ್ಟಿಗೆ ಸತ್ಯ, ಸರಿ ತಪ್ಪು ಅಂತ ವಿಶ್ಲೇಷಣೆ ಮಾಡಲ್ಲ. ಕುಮಾರಸ್ವಾಮಿ ಅವರೇ ಇದಕ್ಕೆ ಪ್ರೇರಣೆ ಅಂತ ಹೇಳ್ತಿದ್ದಾರೆ. ಅವರು ಸಿಕ್ಕಿದ್ದರೆ ಪೆನ್ ಡ್ರೈವ್ ಬಗ್ಗೆ ಕೇಳಿ ಎಂದರು.