Tuesday, April 22, 2025
Google search engine

Homeರಾಜಕೀಯತಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ: ಸುಮಲತಾ ಅಂಬರೀಶ್ ಬೇಸರ

ತಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ: ಸುಮಲತಾ ಅಂಬರೀಶ್ ಬೇಸರ

ಮಂಡ್ಯ: ತಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ, ಕುಮಾರಸ್ವಾಮಿಯವರು ಮನೆಗೆ ಬಂದು ಹೋದ ಮೇಲೆ ಒಂದೇ ಒಂದು ಸಲ ತನಗೆ ಫೋನ್ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಇಂದಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುಮಲತಾ ಅವರು, ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿಯವರ ಪರ ತಾವು ಪ್ರಚಾರ ಮಾಡದ್ದಕ್ಕೆ ಸುಮಲತಾ ಅಂಬರೀಶ್ ಕಾರಣಗಳನ್ನು ತಿಳಿಸಿದರು.

ಜಿಡಿಎಸ್ ನಾಯಕರು ತನ್ನನ್ನು ದೂರವಿಟ್ಟರು, ಅವರ ನಡೆಸಿದ ಸಭೆಗೆ ನನ್ನನ್ನು ಕರೆಯಲಿಲ್ಲ, ನಾನಿಲ್ಲದೆಯೂ ಚುನಾವಣೆ ಗೆಲ್ಲುತ್ತೇವೆ ಎಂಬ ಭಾವನೆ ಅವರಲ್ಲಿ ಮೂಡಿರಬೇಕು, ಈ ಮಾತನ್ನು ಆ ಪಕ್ಷದ ಕೆಲ ವರಿಷ್ಠರು ಹೇಳಿರುವುದು ನನ್ನ ಗಮನಕ್ಕೆ ಬಂದಿದೆ, ಅವರ ವರ್ತನೆ ಮತ್ತು ಧೋರಣಗಳಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದರು.

ತಾವು ಸ್ಪರ್ಧಿಸುವುದಿಲ್ಲ ಅಂತ ಹೇಳಿದಾಗ ತಮ್ಮ ಬೆಂಬಲಿಗರು ಬಹಳ ಬೇಜಾರು ಮಾಡಿಕೊಂಡಿದ್ದರು ತನ್ನನ್ನು ಸ್ಪರ್ಧಿಸುವಂತೆ ಕೊನೇವರೆಗೂ ಒತ್ತಡ ಹೇರುತ್ತಿದ್ದರು, ಅದಕ್ಕೆ ತಾನು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡುವುದು ತಮ್ಮೆಲ್ಲರ ಗುರಿಯಾಗಿರಬೇಕು ಎಂದು ಹೇಳಿದ್ದೆ ಎಂದರು.

RELATED ARTICLES
- Advertisment -
Google search engine

Most Popular