ಕೆ.ಆರ್.ನಗರ : ಬಿಸಿಲಿನ ತಾಪಕ್ಕೆ ಸಾವಿರಾರು ಮೀನುಗಳು ಸಾವನ್ನಪ್ಪಿ ಲಕ್ಷಾಂತರ ರೂಪಾಯಿಗಳು ನಷ್ಟವಾಗಿರುವ ಘಟನೆ ಮಾಯಿಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಮಾಯಿಗೌಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹೊಸಕೆರೆ( ಅಂಕನಹಳ್ಳಿ)ಯಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಕೆರೆಯಲ್ಲಿದ್ದ ವಿವಿಧ ಬಗೆಯ ಸಾವಿರಾರು ಮೀನುಗಳು ಸಾವನ್ನಪಿವೆ. ಇದರಿಂದ ಈ ಕೆರೆಯನ್ನು ೫ ವರ್ಷದ ಅವದಿಗೆ ಮೀನು ಹಿಡಿಯಲು ಗ್ರಾ.ಪಂ.ಗೆ ೧.೨೬ ಲಕ್ಷರೂ ಮತ್ತು ಕೆರೆಗೆ ಮರಿ ಮೀನುಗಳನ್ನು ಬಿಡಲು ೧ ಲಕ್ಷ ರೂಗಳನ್ನು ವೆಚ್ಚಮಾಡಿರುವ ಗೊಲ್ಲರ ಕೊಪ್ಪಲು ಗ್ರಾಮದ ಜಿ.ವಿ.ಶಿವಪ್ರಸಾದ್ ಎಂಬುವರಿಗೆ ನಷ್ಟವಾಗಿದೆ.
ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಅಗುತ್ತಿರುವ ಪರಿಣಾಮ ಬಿಸಿಲ ತಾಪಕ್ಕೆ ಈ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಮಾಯಿಗೌಡನಹಳ್ಳಿ ಗ್ರಾ.ಪಂ.ಪಿಡಿಓ ರಾಜೇಶ್ ಬೇಟಿ ನೀಡಿ ಸತ್ತ ಮೀನುಗಳನ್ನು ಪರಿಶೀಲನೆ ನಡೆಸಿದರು.
ಪರಿಹಾರಕ್ಕೆ ಮನವಿ: ಸಾವಿರಾರು ಮೀನುಗಳು ಸತ್ತಿರುವುದರಿಂದ ನನಗೆ ೨ ಲಕ್ಷದಷ್ಟು ನಷ್ಟ ಸಂಭವಿಸಿದ್ದು ಮಾಯಿಗೌಡನಹಳ್ಳಿ ಗ್ರಾ.ಪಂ.ನವರು ಕೆರೆಯ ಗುತ್ತಿಗೆ ಅವಧಿಯನ್ನು ಇನ್ನು ಒಂದು ವರ್ಷ ಹೆಚ್ಚಿಸುದು ಮತ್ತು ಮೀನುಗಾರಿ ಇಲಾಖೆಯು ಸರ್ಕಾರ ದಿಂದ ಪರಿಹಾರವನ್ನು ಕೊಡಿಸ ಬೇಕೆಂದು ಕೆರೆಯ ಗುತ್ತಿಗೆದಾರ ಗೊಲ್ಲರಕೊಪ್ಪಲು ಶಿವಪ್ರಸಾದ್ ಮನವಿ ಮಾಡಿದ್ದಾರೆ.