Monday, April 21, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು : ಸುರತ್ಕಲ್ NITK ಸ್ಟ್ರಾಂಗ್ ರೂಂ ಸೇರಿದ ಅಭ್ಯರ್ಥಿಗಳ ಭವಿಷ್ಯಕ್ಕೆ ಬಿಗಿ ಭದ್ರತೆ

ಮಂಗಳೂರು : ಸುರತ್ಕಲ್ NITK ಸ್ಟ್ರಾಂಗ್ ರೂಂ ಸೇರಿದ ಅಭ್ಯರ್ಥಿಗಳ ಭವಿಷ್ಯಕ್ಕೆ ಬಿಗಿ ಭದ್ರತೆ

ಮಂಗಳೂರು (ದಕ್ಷಿಣ ಕನ್ನಡ): ಲೋಕಸಭಾ ಚುನಾವಣೆಯ ಮತ ಪೆಟ್ಟಿಗೆಗಳನ್ನು ಸುರತ್ಕಲ್ ಎನ್ ಐಟಿಕೆಯ ಸ್ಟ್ರಾಂಗ್ ರೂಮ್‌ನಲ್ಲಿಡಲಾಗಿದೆ. ಶುಕ್ರವಾರ ನಡೆದ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಭವಿಷ್ಯ ಎನ್ ಐಟಿಕೆಯ ಭದ್ರತಾ ಕೊಠಡಿ ಗಳಲ್ಲಿ ಭದ್ರವಾಗಿದ್ದು, ಜೂ.೪ರಂದು ಮತಗಳ ಎಣಿಕೆ ನಡೆಯಲಿದೆ. ಅಲ್ಲಿಯ ವರೆಗೆ ಭದ್ರತಾ ಕೊಠಡಿಗಳಿಗೆ ಈಗಾಗಲೇ ಸಿಎಆರ್ ವಿಭಾಗದ ಡಿಸಿಪಿ ಸಿದ್ದನಗೌಡ ಪಟೀಲ್ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಎನ್ ಐಟಿಕೆಯಲ್ಲಿ ಮಾಡಲಾಗಿರುವ ಮತಪೆಟ್ಟಿಗೆಗಳ ಭದ್ರತಾ ಕೊಠಡಿಗೆ ಮೂರು ಪಾಳಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರತೀ ಪಾಳಿಯಲ್ಲಿ ೪೦ ಮಂದಿ ಸಿವಿಲ್ ಪೊಲೀಸರು, ೪೦ ಸಶಸ್ತ್ರ ಪೊಲೀಸರು, ರಾಜ್ಯ ಮೀಸಲು ಪೊಲೀಸ್ ಪಡೆಯ ೮ ಮಂದಿ ಜವಾನರು ಭದ್ರತೆ ಒದಗಿಸಲಿದ್ದಾರೆ. ಜೊತೆಗೆ ಭದ್ರತಾ ಕೊಠಡಿಯ ಸುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಶ್ವಾನ ದಳ ಭದ್ರತೆಯಲ್ಲಿ ಇರಲಿದೆ.

RELATED ARTICLES
- Advertisment -
Google search engine

Most Popular