ಕೆ.ಆರ್.ಪೇಟೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಯಿಂದ ಲಕ್ಷಾಂತರ ರೂ ಮೌಲ್ಯದ ತೆಂಗಿನ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು ೧ಎಕರೆ ೧೦ಗುಂಟೆಯಲ್ಲಿದ್ದ ೧೫ ತೆಂಗಿನ ಮರಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶ. ಗ್ರಾಮದ ಎ.ಬಿ.ಕುಮಾರ್ ಅವರಿಗೆ ಸೇರಿದ ಜಮೀನು. ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಷಗೊಂಡು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಗಡ. ವಿಷಯ ತಿಳಿದ ಕೂಡಲೇ ಆಗಮಿಸಿದ ಕೆ.ಆರ್.ಪೇಟೆ ಅಗ್ನಿಶಾಮದ ದಳದ ಅಧಿಕಾರಿಗಳು ಸ್ಥಳಕ್ಜಾಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆ ಕುರಿತು ರೈತ ಎ.ಬಿ.ಕುಮಾರ್ ಪೋಲೀಸ್ ಠಾಣೆಗೆಯಲ್ಲಿ ದೂರು ದಾಖಲಾಗಿದೆ.
