ಮಂಡ್ಯ: ನಾಯಿ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿದ ಘಟನೆ ಪಾಂಡವಪುರ ತಾಲೋಕಿನ ಕನಗನಹಳ್ಳಿ ಗ್ರಾಮದಲ್ಲಿ ಮುಂಜಾನೆ ೩.೩೦ ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ.
ನಾಯಿಯನ್ನು ಹಿಡಿದು ಸ್ವಲ್ಪ ದೂರ ಎಳೆದೊಯ್ದು ತಿಂದು ಹಾಕಿರುವ ಚಿರತೆ. ನಾಯಿ ಮೇಲೆ ಚಿರತೆ ದಾಳಿ ಮಾಡಿರುವ ದೃಶ್ಯ ಮೈಸೂರು- ಕೆ.ಆರ್.ಪೇಟೆ ಮುಖ್ಯ ರಸ್ತೆಯ ಅಂಗಡಿಯೊಂದರ ಮುಂದೆ ಅಳವಡಿಸಿದರುವ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಜಮೀನಿನ ಬಳಿ ತೆರಳಿದ್ದ ರೈತರಿಗೆ ಚಿರತೆ ಕಾಣಿಸಿಕೊಂಡು ಜೀವಭಯ ಹುಟ್ಟಿಸಿದೆ. ಕಳೆದ ಒಂದು ತಿಂಗಳಿನಿಂದ ಗ್ರಾಮದ ಅಸುಪಾಸಿನಲ್ಲಿ ಕಾಣಿಸಿಕೊಂಡಿರುವ ಚಿರತೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದ ಗ್ರಾಮಸ್ಥರು. ಕೊಡಲೇ ಬೋನು ಇರಿಸಿ ಚಿರತೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದರು.