Tuesday, April 22, 2025
Google search engine

Homeರಾಜ್ಯಇಂದು ಆವಳಿ ಗ್ರಾಮದಲ್ಲಿ ಓಕಳಿ ಹಬ್ಬ, ಬಸವೇಶ್ವರ ಜಾತ್ರಾ ಮಹೋತ್ಸವ

ಇಂದು ಆವಳಿ ಗ್ರಾಮದಲ್ಲಿ ಓಕಳಿ ಹಬ್ಬ, ಬಸವೇಶ್ವರ ಜಾತ್ರಾ ಮಹೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ 6 ವರ್ಷಕ್ಕೆ ಓಮ್ಮೆ ನಡೆಯುವ ಓಕಳಿ ಹಬ್ಬ ಮತ್ತು ಬಸವೇಶ್ವರ ಜಾತ್ರಾ ಮಹೋತ್ಸಕ್ಕೆ ಗ್ರಾಮ ನವವಧುವಿನಂತೆ ಸಿಂಗಾರಗೊಂಡಿದೆ

2018 ರಲ್ಲಿ ನಡೆದಿದ್ದ ಈ ಓಕುಳಿ ಹಬ್ಬ ಜಾತ್ರಾ ಮಹೋತ್ಸವ 29ರ ಸೋಮವಾರ ಸಂಜೆ 5 ಗಂಟೆಗೆ ಓಕಳಿ ಹಬ್ಬ ಮತ್ತು 30ರ ಮಂಗಳವಾರ ಬಸವೇಶ್ವರ ಜಾತ್ರಾ ಮಹೋತ್ಸವ ಬೆಳಿಗ್ಗೆ 10ಗಂಟೆಗೆ  ನಡೆಯಲಿದೆ

ಇದಕ್ಕಾಗಿ ಗ್ರಾಮದಲ್ಲಿರುವ ಬಸವೇಶ್ವರ ದೇವಾಯಲವನ್ನು ಬಣ್ಣ-ಸುಣ್ಣ ಬಳಿದು ಸಿರಿಯಲ್ ಸೆಟ್ ಹಾಕಿ ಶೃಂಗಾರ ಮಾಡಲಾಗಿದ್ದು ಓಕಳಿ ಹಬ್ಬದ ದಿನ ರಾಸುಗಳ ಪಂಜಿನ ಮೆರವಣಿಗೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆ ಮಾಡಿ ಕೊಳ್ಳಲಾಗಿದೆ.

ಈ ಹಬ್ಬ ಮತ್ತು ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಹೆಣ್ಣು ಮಕ್ಕಳು ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಬಾಯಿಗೆ ಬೀಗ ಹಾಕಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇವಾಗಿದೆ .

ಈ ಓಕುಳಿ ಹಬ್ಬ ಮತ್ತು ಜಾತ್ರಾ ಮಹೋತ್ಸವದ ಯಶಸ್ವಿಗೆ ದಮ್ಮನಹಳ್ಳಿ ಮತ್ತು ದಮ್ಮನಹಳ್ಳಿ ಕೊಪ್ಪಲು ಗ್ರಾಮದ ಯಜಮಾನರು ಸಕಲ ಸಿದ್ದತೆ ಮಾಡಿದ್ದು ತಾಲೂಕಿನ ವಿವಿಧ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮಕ್ಕೆ ತಾಲೂಕಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಧರ್ಮಕುಮಾರ್ ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular