ಚಾಮರಾಜನಗರ: ಇದೇ ೨೬ರಂದು ಲೋಕಸಭಾ ಚುನಾವಣೆಯ ಮತದಾನದ ದಿನ ಘರ್ಷಣೆ ನಡೆದಿದ್ದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇಂದು ಸೋಮವಾರ ಮರು ಮತದಾನ ಆರಂಭವಾಗಿದೆ.
ಮತಗಟ್ಟೆ ಹಾಗೂ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇಂಡಿನಗತ್ತ ಮತ್ತು ಮೆಂದಾರೆ ಗ್ರಾಮಗಳ ಮತದಾರರು ಈ ಮತಗಟ್ಟೆ ವ್ಯಾಪ್ತಿಗೆ ಬರುತ್ತಿದ್ದು, ಒಟ್ಟು ೫೨೮ ಮತದಾರರಿದ್ದಾರೆ. ಬೆಳಿಗ್ಗೆ ೭ ಗಂಟೆಯಿಂದ ಮತದಾನ ಆರಂಭವಾಗಿದ್ದು, ಈವರೆಗೆ ಮೆಂದಾರೆ ಗ್ರಾಮದ ೫೪ ಮಂದಿ ಹಾಗೂ ಇಂಡಿಗನತ್ತ ಗ್ರಾಮದ ಒಬ್ಬರು ಹಕ್ಕು ಚಲಾಯಿಸಿದ್ದಾರೆ.