ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸ್ವೀಪ್ ಸಮಿತಿ ವತಿಯಿಂದ ಲೋಕಸಭೆ ಚುನಾವಣೆ ಕುರಿತು ಹಿರಿಯ ನಾಗರಿಕರಿಂದ ಮಂಗಳವಾರ ಏಪ್ರಿಲ್ 30 ರಂದು ಮತದಾನ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು.
ಬಿ ಬ್ಲಾಕ್ ಚಿಲ್ಡ್ರನ್ಸ್ ಪಾರ್ಕ್ ನಿಂದ ಆರಂಭವಾದ ಜಾಥಾ ಎಂ.ಸಿ.ಸಿ ಹಳ್ಳದ ವೃತ್ತದಲ್ಲಿ ಮುಕ್ತಾಯಗೊಂಡಿತು. ಮತದಾನದಲ್ಲಿ ಶತಕ ದಾಟಿದ ಹಿರಿಯ ನಾಗರಿಕ ಮತದಾರರಾದ ಶೇಖ್ ಮದರ್ ಸಾಬ್ (103), ಕೆ ರಾಜು (103), ಬಸಮ್ಮ (101), ಹನುಮಂತಪ್ಪ (103), ಹನುಮಮ್ಮ (102) ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಜಿಲ್ಲಾ ತಜ್ಞ ಹಾಗೂ ಹಿರಿಯ ನಾಗರಿಕ ಇಲಾಖೆ ಉಪನಿರ್ದೇಶಕ ಕೆ.ಕೆ.ಪ್ರಕಾಶ್, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಗುರುಮೂರ್ತಿ, ಸಂಘದ ನಿವೃತ್ತ ಅಧ್ಯಕ್ಷ ಭರತ್ ರಾಜ್, ನಿವೃತ್ತ ಎಸ್ಪಿ ರವಿನಾರಾಯಣ್, ಹಿರಿಯ ನಾಗರಿಕ ಮತದಾರರು ಇತರರು ಇದ್ದರು.