ಚೆನ್ನೈ: ಉಮಾ ರಮಣನ್ ಅವರು ೩೫ ವರ್ಷಗಳ ಅವಧಿಯಲ್ಲಿ ೬೦೦೦ಕ್ಕೂ ಅಧಿಕ ಕಾನ್ಸರ್ಟ್ ಗಳಲ್ಲಿ ಹಾಡಿದ್ದಾರೆ. ಎವಿ ರಮಣನ್ ಅವರನ್ನು ಭೇಟಿ ಮಾಡಿದ ನಂತರ ಇಬ್ಬರೂ ಜಂಟಿಯಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಇಳಯರಾಜ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಅವರ ಖ್ಯಾತಿ ಹೆಚ್ಚಾಯಿತು.
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಉಮಾ ರಮಣನ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ೭೨ ವರ್ಷ ವಯಸ್ಸಾಗಿತ್ತು. ತಮಿಳು ಸಿನಿಮಾಗಳಲ್ಲಿ ಹಲವು ಮೆಲೋಡಿ ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗೆ ಇದೆ. ಅವರ ಪತಿ ಅವಿ ರಮಣನ್ ಅವರು ಖ್ಯಾತ ಗಾಯಕರು. ಈ ದಂಪತಿಗೆ ಓರ್ವ ಮಗ ಇದ್ದಾನೆ. ಉಮಾ ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಉಮಾ ರಮಣನ್ ಅವರು ೩೫ ವರ್ಷಗಳ ಅವಧಿಯಲ್ಲಿ ೬೦೦೦ಕ್ಕೂ ಅಧಿಕ ಕಾನ್ಸರ್ಟ್?ಗಳಲ್ಲಿ ಹಾಡಿದ್ದಾರೆ. ಎವಿ ರಮಣನ್ ಅವರನ್ನು ಭೇಟಿ ಮಾಡಿದ ನಂತರ ಇಬ್ಬರೂ ಜಂಟಿಯಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಇಳಯರಾಜ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಅವರ ಖ್ಯಾತಿ ಹೆಚ್ಚಾಯಿತು.
೧೯೭೭ರಲ್ಲಿ ರಿಲೀಸ್ ಆದ ಶ್ರೀ ಕೃಷ್ಣಲೀಲಾ ಸಿನಿಮಾದ ಮೋಹನ ಕಣ್ಣನ ಮುರಳಿ.. ಹಾಡಿನ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ನೀಳಲ್ಗಳ್ ಸಿನಿಮಾದ ಪೂಂಗಾತವೇ ತಾಳ ತಿರವೈ.. ಹಾಡನ್ನು ಹಾಡಿ ಉಮಾ ರಮಣ್ ಅವರು ಗಮನ ಸೆಳೆದರು. ಈ ಹಾಡು ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಯಿತು. ಉಮಾ ರಮಣ್ ನಿಧನವಾರ್ತೆ ತಮಿಳು ಚಿತ್ರರಂಗವನ್ನು ಶೋಕಕ್ಕೆ ತಳ್ಳಿದೆ. ಅನೇಕ ಸೆಲೆಬ್ರಿಟಿಗಳು ಉಮಾ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಅವರು ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ.