Monday, April 21, 2025
Google search engine

Homeಸಿನಿಮಾರಣ ರಾಕ್ಷಸ ಚಿತ್ರದ ಪೋಸ್ಟರ್ ಬಿಡುಗಡೆ

ರಣ ರಾಕ್ಷಸ ಚಿತ್ರದ ಪೋಸ್ಟರ್ ಬಿಡುಗಡೆ

ಚಂದನವನಕ್ಕೆ ಹೊಸ ಪ್ರತಿಭೆಗಳ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ಸಾಲಿನಲ್ಲಿ ರಣ ರಾಕ್ಷಸ ಚಿತ್ರವೊಂದು ಸದ್ದಿಲ್ಲದೆ ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡಿದೆ. ನಾಯಕ ಮತ್ತು ನಿರ್ಮಾಪಕ ಹೆಚ್.ಪಿ.ನರಸಿಂಹಸ್ವಾಮಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ನಾಂದಿ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರು ತಂದೆ ರಂಗಭೂಮಿ ಕಲಾವಿದರು. ಅವರ ಬಳುವಳಿಯಿಂದಲೇ ನನಗೂ ಚಿಕ್ಕ ವಯಸ್ಸಿಗೆ ಅಭಿನಯದ ಗೀಳು ಹುಟ್ಟಿಕೊಂಡಿತು. ನಂತರ ಉದ್ಯಮದಲ್ಲಿ ಯಶಸ್ಸು ಕಂಡು ಚಿತ್ರಮಂದಿರ ಮಾಲೀಕನಾದೆ. ಇದೆಲ್ಲಾದರ ಅನುಭವದಿಂದ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ.

ರಣ ರಾಕ್ಷಸ ಚಿತ್ರವು ತಂದೆ ಮಗಳ ಸಂಬಂಧವನ್ನು ಹೇಳಲಿದೆ. ಚಿಟ್ಟೆಮ್ಯಾನ್ ಫ್ಯಾಂಟಸಿ ಕಥೆ. ಡಾನ್ ಶಿವ ಹೆಸರೇ ಹೇಳುವಂತೆ ಇದೊಂದು ಭೂಗತಲೋಕದ ಅಂಶಗಳನ್ನು ಒಳಗೊಂಡಿದೆ. ಕೊನೆಯ ಸಿನಿಮಾ ಕೊರಗಜ್ಜ ಚಿತ್ರವು ಕಾಂತಾರದಂತೆ ಮೂಡಿಬರಲಿದ್ದು, ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾದ ಒಂದು ಹಾಡಿಗೆ ಸಾಹಿತ್ಯ ಬರೆದು ಹಾಡಿದ್ದೇನೆ. ನಾಲ್ಕರ ಪೈಕಿ ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ. ಎಲ್ಲಾ ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಸದ್ಯಕ್ಕೆ ರಣ ರಾಕ್ಷಸ ಜನರಿಗೆ ತೋರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

RELATED ARTICLES
- Advertisment -
Google search engine

Most Popular