ಧಾರವಾಡ: ಬರ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗಿ ನಾವು ಹಕ್ಕು ಪಡೆದಿದ್ದೇವೆ. ಮೋದಿಗೆ ಹೇಗೆ ಪಾಠ ಕಲಿಸಬೇಕಂತ ಇಡೀ ದೇಶಕ್ಕೆ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನವಲೂರನಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಬಿಸಿಯೂಟ ಶುರು ಮಾಡಿದ್ದು ಕಾಂಗ್ರೆಸ್ ಪಕ್ಷ. ಮಕ್ಕಳಿಗೆ ಹಾಲು ಕೊಡುವ ಕ್ಷೀರಭಾಗ್ಯ ಆರಂಭಿಸಿದ್ದು ನಾವು, ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಟ್ಟವರು ನಾವು. ಶೂ ಭಾಗ್ಯ ಕೊಟ್ಟವರೂ ನಾವೇ. ಹಲವಾರು ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ’ ಎಂದು ಸಮರ್ಥಿಸಿಕೊಂಡರು.
ಮುಂದುವರೆದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಗುಂಡೂರಾವ್?, ‘ಒಂದೇ ದೇಶದಲ್ಲಿ ಹತ್ತು ವರ್ಷ ಆಳ್ವಿಕೆ ಮಾಡಿದ್ದೀರಾ. ಮೋದಿ ಅವರು ಅಚ್ಚೇ ದಿನ್ ಎಂದು ಹೇಳಿದ್ದರು. ಈಗ ಜನರಿಗೆ ಅಚ್ಚೇದಿನ್? ತಂದು ಕೊಟ್ಟಿದ್ದೇವೆ ಎಂದು ಹೇಳುವ ತಾಕತ್ತು, ಧೈರ್ಯ ಮೋದಿಗೆ, ಅಮಿತ್ ಶಾಗೆ ಇದೆಯಾ . ಅಮಿತ್ ಶಾ, ಪ್ರಹ್ಲಾದ್? ಜೋಶಿ ಜನರಿಗೆ ಏನು ಮಾಡಿದ್ದೇವೆ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ನೀವು ಎಂದು ಹೆಳಿದರು.
ರೈತರಿಗೆ ಸಹಾಯ ಮಾಡಲಿಲ್ಲ, ಸಾಲ ಮನ್ನಾ ಮಾಡಲಿಲ್ಲ, ಬರ ಪರಿಹಾರ ಕೊಡುವುದಕ್ಕೂ ಹಿಂದೆ ಮುಂದೆ ನೋಡಿದರು. ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಕೊಡುಗೆ ಏನು. ಕರ್ನಾಟಕದ ಬಿಜೆಪಿ ಎಂಪಿಗಳ ಕೊಡುಗೆ ಏನು. ಅದಾನಿ, ಅಂಬಾನಿಗೆ ಸಹಾಯ ಮಾಡಿದಿರಿ. ಆದರೆ ಈ ದೇಶದ ಜನರಿಗೆ ಏನೂ ಮಾಡಲಿಲ್ಲ. ಕಾಂಗ್ರೆಸ್ ಜನರ ಜೊತೆ ನಿಂತಿದೆ. ಕಾಂಗ್ರೆಸ್?ಗೆ ಶಕ್ತಿ ಕೊಡಬೇಕು. ದೇಶಕ್ಕೆ ಹೊಸ ಸರ್ಕಾರ ಬರಬೇಕು. ಸಂವಿಧಾನ ಉಳಿಯಬೇಕು. ಪ್ರಜಾಪ್ರಭುತ್ವ ಉಳಿಸಬೇಕಿದೆ. ಅದಕ್ಕೆ ಜನಪರವಾದ ಸರ್ಕಾರ ಬರಬೇಕು. ಅದಕ್ಕಾಗಿ ಕಾಂಗ್ರೆಸ್‌ನ್ನು ಬೆಂಬಲಿಸಬೇಕು” ಎಂದು ಜನರಲ್ಲಿ ಮನವಿ ಮಾಡಿದರು.