Saturday, April 19, 2025
Google search engine

Homeರಾಜ್ಯಸುದ್ದಿಜಾಲಪದವೀಧರ ವಿಧಾನಪರಿಷತ್ ಚುನಾವಣೆ ಜೂ.೩ಕ್ಕೆ ಮತದಾನ

ಪದವೀಧರ ವಿಧಾನಪರಿಷತ್ ಚುನಾವಣೆ ಜೂ.೩ಕ್ಕೆ ಮತದಾನ

ಬೆಂಗಳೂರು : ರಾಜ್ಯ ವಿಧಾನಪರಿಷತ್‌ನ ೬ ಸ್ಥಾನಗಳಿಗೆ ಆಯೋಗವು ಚುನಾವಣೆಯನ್ನು ಘೋಷಣೆ ಮಾಡಿದ್ದು, ೩ ಶಿಕ್ಷಕರ ಕ್ಷೇತ್ರ ಮತ್ತು ೩ ಪದವೀಧರ ಕ್ಷೇತ್ರಗಳ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.

ಜೂನ್ ೩ರಂದು ಬೆಳಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ. ಜೂನ್ ೬ರಂದು ಫಲಿತಾಂಶ ಕಟವಾಗಲಿದೆ ಎಂದು ಪ್ರಕಟನೆ ತಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಮೇ.೧೬ ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮೇ.೨೦ ಕೊನೆಯ ದಿನವಾಗಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ , ಆಗ್ನೇಯ ಶಿಕ್ಷಕರ, ನೈರುತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

RELATED ARTICLES
- Advertisment -
Google search engine

Most Popular