Tuesday, April 22, 2025
Google search engine

Homeಅಪರಾಧಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಸಾವು

ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಸಾವು

ಕೋಲಾರ : ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಗೌತಮ್ ಗೌಡ (26) ಎಂದು ಗುರುತಿಸಲಾಗಿದೆ. ಈತ ಮೈಸೂರಿನ ರಾಘವೇಂದ್ರನಗರ ಬಡಾವಣೆ ನಿವಾಸಿಯಾಗಿದ್ದಾರೆ.

ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೌತಮ್ ಗೌಡ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ, ಸರಿಯಾಗಿ ಈಜು ಬಾರದಿದ್ದರೂ ಈಜಲು ಹೋಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಈಜುತ್ತಿದ್ದ ಅವರು ಕ್ರಮವೇಣ ಮುಳುಗಲಾರಂಭಿಸಿದರು.

ಯುವಕ ನೀರಿಗೆ ಧುಮುಕಿದಲ್ಲಿಂದಲೇ ಆತನ ತಂಗಿ ವಿಡಿಯೋ ಮಾಡುತ್ತಿದ್ದರು. ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅವರಿಗೂ ಅವರಿವಾದಂತಿಲ್ಲ. ದುರದೃಷ್ಟವಶಾತ್, ನೋಡ ನೋಡುತ್ತಿದ್ದಂತೆಯೇ ಗೌತಮ್ ಗೌಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟದ ದೃಶ್ಯ ವಿಡಿಯೋದಲ್ಲಿದೆ.

RELATED ARTICLES
- Advertisment -
Google search engine

Most Popular