Tuesday, April 22, 2025
Google search engine

Homeರಾಜಕೀಯಮುಖ್ಯಮಂತ್ರಿಯಾಗಲು ಶಿವಕುಮಾರ್ ಏನಾದರೂ ಮಾಡಬಲ್ಲರು: ಮಾಜಿ ಶಾಸಕ ರಾಜುಗೌಡ

ಮುಖ್ಯಮಂತ್ರಿಯಾಗಲು ಶಿವಕುಮಾರ್ ಏನಾದರೂ ಮಾಡಬಲ್ಲರು: ಮಾಜಿ ಶಾಸಕ ರಾಜುಗೌಡ

ಯಾದಗಿರಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರಿಗೆ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಇದೆ ಅದಕ್ಕಾಗಿ ಅವರು ಏನು ಬೇಕಾದರೂ ಮಾಡಬಲ್ಲರು, ಕಾರ್ಯಸಾಧನೆಗಾಗಿ ಹಲವಾರು ಅಸ್ತ್ರಗಳನ್ನು ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಶಾಸಕ ನರಸಿಂಹ ನಾಯಕ್ (ರಾಜು ಗೌಡ) ಹೇಳಿದರು.

ಯಾದಗಿರಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು, ಜನ ಕಾದು ನೋಡಲಿ, ಮುಂದೊಂದು ದಿನ ಅವರು ಯತೀಂದ್ರ ಸಿದ್ದರಾಮಯ್ಯ ಮೇಲೆ ಯಾವುದಾದರೂ ಆರೋಪ ಹೊರೆಸಿ ಅದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇಲ್ಲದಿಲ್ಲ ಎಂದರು. ಹಾಗಾಗೇ, ಡಿಕೆ ಸಹೋದರರ ಜೊತೆ ಹೆಚ್ಚು ಒಡನಾಟ ಇಟ್ಟುಕೊಳ್ಳುವುದು ಬೇಡ ಅಂತ ಸಿದ್ದರಾಮಯ್ಯವನವರಿಗೆ ತಾನು ಸಲಹೆ ನೀಡಬಯಸುವುದಾಗಿ ರಾಜುಗೌಡ ಹೇಳಿದರು.

ರಾಹುಲ್ ಗಾಂಧಿಯವರ ಮನಸ್ಸಲ್ಲೂ ಅದೇ ಇರುವಂತಿದೆ, ಮಂಬರುವ ದಿನಗಳಲ್ಲಿ ಅವರು ಸಿದ್ದರಾಮಯ್ಯರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು ಎಂದು ರಾಜುಗೌಡ ಹೇಳಿದರು.

RELATED ARTICLES
- Advertisment -
Google search engine

Most Popular