Monday, April 21, 2025
Google search engine

Homeರಾಜ್ಯಮೊದಲ ಹಂತದ ಮತದಾನ ನಡೆದ 14 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ: ಯದುವೀರ್ ಒಡೆಯರ್

ಮೊದಲ ಹಂತದ ಮತದಾನ ನಡೆದ 14 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ: ಯದುವೀರ್ ಒಡೆಯರ್

ದಾವಣಗೆರೆ: ಮೊದಲ ಹಂತದ ಮತದಾನ ನಡೆದ ಎಲ್ಲ 14 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

 ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಮಾಡಲು ನಗರಕ್ಕೆ ಅಗಮಿಸಿರುವ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲೂ ಮೋದಿ ಅಲೆ ಇದೆ, ಜನರೆಲ್ಲ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದನ್ನು ಎದುರು ನೋಡುತ್ತಿದ್ದಾರೆ ಎಂದರು.

ಮೋದಿಯವರ ಎರಡನೇ ಅವಧಿಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ, ದೇಶದ ಆರ್ಥಿಕ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗಿದೆ ಅವರು ವಿಶ್ವನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಯದುವೀರ್ ಹೇಳಿದರು.

ಬಿಜೆಪಿ ಸಾಧನೆ ಏನೂ ಇಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಅದರೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಕಂಡಿರುವ ಅಭಿವೃದ್ಧಿ ನಮ್ಮ ಕಣ್ಣ ಮುಂದಿದೆ, ಅವರ ಸಾಧನೆಗಳ ಫಲದಿಂದಲೇ ನಾವೆಲ್ಲ ಗೆಲ್ಲೋದು ಎಂದು ಅವರು ಹೇಳಿದರು.

ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಯದುವೀರ್, ಆ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ ಮತ್ತು ಸರ್ಕಾರದ ನಿಲುವನ್ನು ಪ್ರಕಟಿಸಿದ್ದಾರೆ, ತನಿಖೆ ಪೂರ್ಣಗೊಂಡ ಬಳಿಕ ತಾನು ಹೇಳಿಕೆ ನೀಡುವುದಾಗಿ ಹೇಳಿದರು.

RELATED ARTICLES
- Advertisment -
Google search engine

Most Popular