Monday, April 21, 2025
Google search engine

Homeರಾಜ್ಯಈ ಬಾರಿ ಗೀತಾ ಗೆಲುವು ಗ್ಯಾರಂಟಿ: ಸಚಿವ ಮಧು ಬಂಗಾರಪ್ಪ

ಈ ಬಾರಿ ಗೀತಾ ಗೆಲುವು ಗ್ಯಾರಂಟಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಯಾವತ್ತೂ ಇಷ್ಟೊಂದು ಒಗ್ಗಟ್ಟು ಕಂಡಿರಲಿಲ್ಲ. ಈ ಬಾರಿ ಕಾರ್ಯಕರ್ತರು ಕಮಿಟ್‌ಮೆಂಟ್ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಂದು ಶುಕ್ರವಾಋ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ ಪರ ಮತಯಾಚನೆ ವೇಳೆ ಮಾತನಾಡಿದ ಸಚಿವರು, ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ಆದ ಮೇಲೆ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ. ಮತದಾರರು ಕೂಡ ಈ ಬಾರಿ ಬದಲಾವಣೆ ಮಾಡಬೇಕು ಅಂದುಕೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಸಂಘಟನೆ ಕೊರತೆ ಇತ್ತು. ಈಗ ಬಹಳ ಚೆನ್ನಾಗಿ ಸಂಘಟನೆ ಆಗಿದೆ ಎಂದರು.

ರಾಹುಲ್ ಗಾಂಧಿ ಭೇಟಿ ಒಳ್ಳೆಯ ಸಂದೇಶ ಕೊಟ್ಟಿದೆ. ನನಗೆ ಹಿಂದಿ ಅಷ್ಟು ಬರೊಲ್ಲ. ಆದರೂ ನನಗೆ ಟ್ರಾನ್ಸ್‌ಲೇಟ್ ಮಾಡು ಅಂದ್ರು ಮಾಡಿದೆ. ಅದರಲ್ಲಿ ಯಾವುದೇ ಎಡವಟ್ಟು ಇಲ್ಲ. ಮಾಧ್ಯಮಗಳಲ್ಲಿ ಎಡವಟ್ಟು ಅಂತಾ ಸುದ್ದಿ ಬಂತು. ಮನಸಿಗೆ ಸ್ವಲ್ಪ ನೋವು ಆಯ್ತು ಎಂದರು.
ನಿನ್ನೆ ೬ ವಿಧಾನಸಭಾ ಕ್ಷೇತ್ರದ ಜನರು ಮಾತ್ರ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಚುನಾವಣೆಯಲ್ಲಿ ಜನರು ಬದಲಾವಣೆ ಮಾಡ್ತಾರೆ ಎನ್ನುವ ನಿರೀಕ್ಷೆ ಇದೆ. ಈ ಬದಲಾವಣೆ ಜಿಲ್ಲೆಯಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಬದಲಾವಣೆ ಆದರೆ ವಿಐಎಸ್‌ಎಲ್ ಸರಿ ಮಾಡ್ತೇವೆ. ಶರಾವತಿ ಸಂತ್ರಸ್ತರಿಗೆ ತೊಂದರೆ ಕೊಟ್ಟಿರುವ ಶಾಪ ರಾಘವೇಂದ್ರ ಅವರಿಗೆ ತಗಲುತ್ತದೆ. ನನ್ನ ವಿರುದ್ದ ಟೀಕೆ ಟಿಪ್ಪಣಿ ಮಾಡಿದರೆ ಮಾಡಲಿ ೭ ನೇ ತಾರೀಖು ನಂತರ ಮಾತನಾಡ್ತೇನೆ ಎಂದರು.

ಈ ಬಾರಿ ಗೀತಾ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಕೆಎಸ್ ಈಶ್ವರಪ್ಪ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಅವರು ಶಿವಮೊಗ್ಗ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಅವರ ಪುತ್ರನಿಗೆ ಟಿಕೇಟ್ ಸಿಕ್ಕಿಲ್ಲ ಅಂತಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ನಾವು ಬೇರೆಯವರ ಒಡಕಿನ ಲಾಭ ಪಡೆಯಲು ಹೋಗುವುದಿಲ್ಲ. ಜನರು ಗ್ಯಾರಂಟಿ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ. ಈ ಬಾರಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular