ಮಂಡ್ಯ: ಬಿಸಿಲಿನ ಬೇಗೆಗೆ ಪಕ್ಷಿ ಸಂಕುಲ ನಲುಗಿದ್ದು, ಬಿಸಿಲ ಬೇಗೆಗೆ ಪಕ್ಷಿಗಳು ಮರದಿಂದ ಕೆಳಗೆ ಬೀಳುತ್ತಿವೆ.
ಮತ್ತೊಂದು ಕಡೆ ನೀರಿಲ್ಲದೆ ಪಕ್ಷಿಗಳು ಕಂಗಾಲಾಗಿ ಪರದಾಡುತ್ತಿದ್ದು, ನೀರು ಸಿಗದೆ ಸಾವನ್ನಪ್ಪುತ್ತಿವೆ.
ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲಿ ಬಾಯಾರಿಕೆಯಿಂದ ಕೆಳಗೆ ಬಿದ್ದು ಕೋಗಿಲೆ ಪಕ್ಷಿ ಸಾವನ್ನಪ್ಪಿದೆ.
ಅತ್ತ ಮದ್ದೂರಿನ ಕೊಕ್ಕರೆ ಬೆಳ್ಳೂರಿನಲ್ಲಿ ಬಿಸಿಲಿನ ಬೇಗೆಗೆ ಪೆಲಿಕಾನ್ ಪಕ್ಷಿಗಳು ಮರದಿಂದ ಕೆಳಗೆ ಬೀಳ್ತಿವೆ.
ಪಕ್ಷಿಗಳ ನೀರಡಿಕೆ ತಣಿಸಲು ನೀರಿನ ವ್ಯವಸ್ಥೆ ಜಿಲ್ಲಾಡಳಿತಕ್ಕೆ ಪಕ್ಷಿ ಪ್ರಯರು ಮನವಿ ಮಾಡಿದ್ದಾರೆ.
ಪಕ್ಷಿ ಸಂಕುಲಗಳ ಉಳಿವಿಗಾಗಿ ಮನೆಯ ಮೇಲೆ ನೀರಿಡುವಂತೆ ಪಕ್ಷಿ ಪ್ರೇಮಿಗಳು ಜನತೆಯಲ್ಲಿ ಕೋರಿದ್ದಾರೆ.