ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಚಾಮರಾಜನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆ.ವಿ ದೊಡ್ಡರಾಯಪೇಟೆ, ಪಣ್ಯದಹುಂಡಿ ಉಪಕೇಂದ್ರದಿಂದ ಹೊರ ಹೊಮ್ಮುವ 11 ಕೆ.ವಿ ಫೀಡರ್‍ನಲ್ಲಿ ನಾಳೆ ಮೇ 5 ರಂದು ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಚಾಮರಾಜನಗರ ಉಪವಿಭಾಗದ ವ್ಯಾಪ್ತಿಯ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಚಾಮರಾಜನಗರ ಪಟ್ಟಣದ ಸೋಮವಾರ ಪೇಟೆ, ಮೂಡ್ಲುಪುರ, ಗಾಳಿಪುರ, ಅಂಬೇಡ್ಕರ್ ಬಡಾವಣೆ, ಸತ್ತಿ ರಸ್ತೆ, ಯಡಪುರ(ಜಿಲ್ಲಾ ಆಸ್ಪತ್ರೆ), ಮಲ್ಲಯ್ಯನಪುರ, ವರದರಾಜಪುರ, ಕೆ.ಹೆಚ್.ಬಿ ಕಾಲೋನಿ, ರೈಲ್ವೆ ಬಡಾವಣೆ, ಉಪ್ಪಾರ ಬೀದಿ, ನಂಜನಗೂಡು ರಸ್ತೆ, ಪೊಲೀಸ್ ಕ್ವಾಟ್ರಸ್ ಮತ್ತು ಸುತ್ತಲಿನ ಪ್ರದೇ±ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ತಾಲೂಕಿನ ಹೊಂಗನೂರು ಕೋಡಿಮೋಳೆ, ಬೂದಿತಿಟ್ಟು, ಬಸವನಪುರ, ಮತ್ತು ಸುತ್ತಲಿನ ಪ್ರದೇಶ ಹಾಗೂ ಮಾದಾಪುರ, ಕಾಡಹಳ್ಳಿ, ಮಸಗಾಪುರ, ಕಿರಗಸೂರು, ಹಂಡ್ರಕಳ್ಳಿ, ಹಂಡ್ರಕಳ್ಳಿ ಮೋಳೆ, ಮಂಗಲ, ಮಂಗಲ ಹೊಸೂರು, ಕಣ್ಣೇಗಾಲ, ಸಿಂಗನಪುರ, ಭೊಗಾಪುರ ಮತ್ತು ಸುತ್ತಲಿನ ಪ್ರದೇಶ ಮತ್ತು ಹೆಗ್ಗೋಠಾರ, ಪಣ್ಯದಹುಂಡಿ, ಬೆಂಡರವಾಡಿ, ಬಿ. ಮಲ್ಲಯ್ಯನಪುರ, ಮುತ್ತಿಗೆ, ಸಣ್ಣೇಗೌಡನಹುಂಡಿ, ಬೇಡರಪುರ, ಜೋಗಿ ಕಾಲೋನಿ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್‍ನ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.