Monday, April 21, 2025
Google search engine

Homeಸ್ಥಳೀಯಸಹಜ ಜೀವನವೇ ಯೋಗ: ವೈದ್ಯಶ್ರೀ ಚನ್ನಬಸವಣ್ಣ ಶರಣರು

ಸಹಜ ಜೀವನವೇ ಯೋಗ: ವೈದ್ಯಶ್ರೀ ಚನ್ನಬಸವಣ್ಣ ಶರಣರು


ಮೈಸೂರು: ಮನುಷ್ಯನ ಸಹಜ ಜೀವನವೇ ಯೋಗ ಎಂದು ಬೆಂಗಳೂರಿನ ಶ್ರೀ ಗಂಗಾ ಯೋಗ ನಿಸರ್ಗ ಚಿಕಿತ್ಸೆ ಹಾಗೂ ಆಯುರ್ವೇದ ಸಂಶೋಧನಾ ಕೇಂದ್ರದ ವೈದ್ಯಶ್ರೀ ಚನ್ನಬಸವಣ್ಣ ಶರಣರು ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದಿಂದ ಸಾರ್ವಜನಿಕರಿಗಾಗಿ ನಡೆಯುತ್ತಿರುವ ಜೀವನೋತ್ಸಾಹ ಶಿಬಿರದ ಐದನೇ ದಿನ ಮೇ ೩ ಶುಕ್ರವಾರದಂದು ಉಪನ್ಯಾಸದಲ್ಲಿ ಯೋಗ-ಆರೋಗ್ಯ? ಕುರಿತು ಮಾತನಾಡುತ್ತ ತಿಳಿಸಿದರು.

ವಿಶ್ವಕ್ಕೆ ಯೋಗವು ನಮ್ಮ ಪ್ರಾಚೀನ ಪರಂಪರೆಯ ಅತಿ ಮಹತ್ವದ ಕೊಡುಗೆಯಾಗಿದೆ. ದೇಹ-ಮನಸ್ಸು ಮತ್ತು ಪ್ರಕೃತಿ ನಡುವಿನ ಬಾಂಧವ್ಯವೇ ಪ್ರಕೃತಿಯ ಯೋಗ. ಮನುಷ್ಯ ಮತ್ತು ಅವನ ಮನಸ್ಸನ್ನು ಒಂದಾಗಿಸುವುದೇ ಸಹಜ ಯೋಗ. ಪ್ರಕೃತಿ ಯೋಗ ಮತ್ತು ಸಹಜ ಯೋಗವನ್ನು ಮಾಡುತ್ತ ಹೋದರೆ ಆರೋಗ್ಯವು ಉತ್ತಮವಾಗಿರುತ್ತದೆ. ಮಾನವನ ಆಧ್ಯಾತ್ಮಿಕ ಶಕ್ತಿಯು ಜಾಗೃತವಾಗಿ ನೆಮ್ಮದಿಯ ಹಾಗೂ ನಿಶ್ಚಿಂತ ಜೀವನ ನಡೆಸಲು ಸಾಧ್ಯವೆಂದು ಹೇಳಿದರು.

ಸಾವಯವ ಕೃಷಿ ಮಿಷನ್‌ನ ಮಾಜಿ ಅಧ್ಯಕ್ಷರಾದ ಶ್ರೀ ಎ.ಎಸ್. ಆನಂದರವರು ಕೃಷಿ ಹಾಗೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧವಿದೆ. ಕೃಷಿ ಅರ್ಥ ಮಾಡಿಕೊಂಡರೆ ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡಂತೆ. ನಮ್ಮ ದೇಹಕ್ಕೆ ಪೂರಕವಾದ ಆಹಾರವನ್ನು ನಮ್ಮ ಪೂರ್ವಜರು ತಿಳಿಸಿದ್ದಾರೆ. ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿಯನ್ನು ಮಾಡಿದಾಗ ಆರೋಗ್ಯಕರವಾದ ಬದುಕನ್ನು ನಮ್ಮದಾಗಿಸಿಕೊಳ್ಳಬಹುದು. ಕೃಷಿಕ ಬೆಳೆಗೆ ಹಾಕುವ ವಿಷ ಪ್ರಕೃತಿಗೆ ಮಾಡುವ ಅಪಚಾರವಾಗಿದೆ. ಮನುಷ್ಯ ಆರೋಗ್ಯವಂತನಾಗಿರಲು ಸಾವಯವ ಕೃಷಿಯ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಜಾನಪದ ವಿದ್ವಾಂಸರಾದ ಡಾ. ಪಿ.ಕೆ. ರಾಜಶೇಖರ್‌ರವರು ಜಾನಪದ ಸಂಸ್ಕೃತಿ ಪರಂಪರಾನುಗತವಾಗಿ ಬಂದ ಶ್ರೀಮಂತ ಸಂಸ್ಕೃತಿಯಾಗಿದೆ. ಗ್ರಾಮೀಣ ಸೊಗಡನ್ನು ಸಮೃದ್ಧವಾಗಿ ಹಿಡಿದಿಟ್ಟಿರುವ ಒಂದು ಶಕ್ತಿ. ಎಲ್ಲಿಯವರೆಗೆ ಜಗತ್ತಿನಲ್ಲಿ ಸಾಮಾನ್ಯವರ್ಗ ಅಸ್ಥಿತ್ವದಲ್ಲಿರುತ್ತದೆಯೋ ಅಲ್ಲಿನ ತನಕ ಜಾನಪದ ಸಂಸ್ಕೃತಿ ತಾನೇ ತಾನಾಗಿ ಉಳಿದುಬರುತ್ತದೆ. ಮೌಖಿಕ ಪರಂಪರೆಯ ಸಾಹಿತ್ಯವೇ ಜಾನಪದವಾಗಿದೆ. ಮನುಷ್ಯ ನಾಗರಿಕತೆಯಿಂದ ಮುಂದುವರಿದರೂ ಸಹ ಅವನ ಮೇಲೆ ಈ ಸಂಸ್ಕೃತಿಯ ಪ್ರಭಾವ ಸಾಕಷ್ಟು ಇರುತ್ತದೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಜಾನಪದವು ಸಾರ್ವಕಾಲಿಕವಾದದು. ಇದು ನಶಿಸದಂತೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರದಾಗಬೇಕು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular