Saturday, April 19, 2025
Google search engine

Homeಅಪರಾಧಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್

ಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಪಡೆಯಲು ಸಲ್ಲಕೆ ಮಾಡಿದ್ದರು. ಆದರೆ, ವಾಲ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಇಂದು ಶನಿವಾರ ಜಾಮೀನು ವಿಚಾರಣೆ ಕೈಗೆತ್ತಿಕೊಂಡಿದ್ದು ರೇವಣ್ಣ ಪರ ವಕೀಲರು ವಾದಮಂಡಿಸಿದ್ದಾರೆ. ಆರೋಪಿ ಮುಗ್ಧ ಎಂದು ಸಾಬೀತುಮಾಡಲು ಅವಕಾಶ ನೀಡಬೇಕು. ಈ ಕಾರಣಕ್ಕಾಗಿಯೇ ಹೆಚ್.ಡಿ.ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಬೇಕು. ನ್ಯಾಯಾಧೀಶರೂ ಪೂರ್ವಾಗ್ರಹವಿಲ್ಲದೇ ನಿರೀಕ್ಷಣಾ ಜಾಮೀನು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಮೂರ್ತಿ ಡಿ. ನಾಯ್ಕ್ ವಾದ ಮಂಡಿಸಿದರು.

ಹೆಚ್.ಡಿ.ರೇವಣ್ಣ ವಿಚಾರಣೆಗೆ ಹಾಜರಾಗಲು ಮುಂದಾದ ನಂತರ ಈ ಕೇಸ್ ಕೋರ್ಟ್ ಎಸ್‌ಐಟಿಯ ಈ ನಡವಳಿಕೆಯನ್ನು ತಿಳಿಯಬೇಕು. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಆರೋಪಿಯಲ್ಲ. ಎ೨ ಆರೋಪಿಗೂ ಹೆಚ್.ಡಿ.ರೇವಣ್ಣಗೂ ಸಂಬಂಧವಿಲ್ಲ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ದೇಶದೆಲ್ಲೆಡೆ ಪ್ರಚಾರವಾಗಿದೆ. ರಾಜಕೀಯ, ಹಣಕಾಸಿನ ಬಲ ಬಳಸಿ ಈ ಕೃತ್ಯ ಮಾಡಿದ್ದಾರೆಂದು ಎಸ್‌ಐಟಿ ಆಕ್ಷೇಪಣೆ ಉಲ್ಲೇಖಿಸಿ ರೇವಣ್ಣ ಪರ ವಕೀಲರ ವಾದವಾಗಿದೆ.

ಎಸ್‌ಐಟಿ ಎಸ್‌ಪಿಪಿ ಬಿ.ಎನ್.ಜಗದೀಶ್ ವಾದಮಂಡಿಸಿದ್ದು, ಮೊದಲ ಎಫ್‌ಐಆರ್‌ನಲ್ಲಿ ಮಾತ್ರ ಜಾಮೀನು ರಹಿತ ಅಪರಾಧಗಳಿಲ್ಲ ಎಂದಿದ್ದೆ. ಜಾಮೀನು ರಹಿತ ಕೇಸ್ ದಾಖಲಿಸುವುದಿಲ್ಲ ಎಂದು ಭರವಸೆ ನೀಡಿಲ್ಲ. ತನಿಖಾಧಿಕಾರಿಯ ಮೊದಲ ಕರ್ತವ್ಯ ಮಹಿಳೆಯ ಜೀವ ಉಳಿಸುವುದು. ಆಕೆಯ ಜೀವ ಉಳಿಸಿ ಸ್ವತಂತ್ರಗೊಳಿಸಲು ಎಸ್‌ಐಟಿ ಪ್ರಯತ್ನಿಸುತ್ತಿದೆ. ಬಡ ಮಹಿಳೆಯನ್ನು ಹುಡುಕಲು ಎಸ್‌ಐಟಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆಕೆಯ ಪುತ್ರ ನೀಡಿರುವ ದೂರು ಸಂಪೂರ್ಣ ದೂರೆಂದು ಭಾವಿಸಬಾರದು. ಸೆ.೩೬೪ಂ ಯಾವುದೇ ಒಂದು ಕೃತ್ಯ ಮಾಡಲು ಅಥವಾ ಮಾಡದಂತೆ ತಡೆಯಲು ಅಪಹರಣ ಇದೇ ಕಾರಣಕ್ಕಾಗಿಯೇ ಇನ್ ಕ್ಯಾಮರಾ ವಿಚಾರಣೆ ಕೋರಿದ್ದೆ. ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದು ಯಾರು ಸಂಸದ ಪ್ರಜ್ವಲ್ ರೇವಣ್ಣ ಪಾತ್ರವಿದೆಯಾ ಇಲ್ಲವಾ ಗೊತ್ತಿಲ್ಲ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular