Monday, April 21, 2025
Google search engine

Homeಅಪರಾಧಪತಿ-ಪತ್ನಿ ನಡುವಿನ ಗಲಾಟೆಗೆ ಮೊಸಳೆಗೆ ತುತ್ತಾದ ಮಗು

ಪತಿ-ಪತ್ನಿ ನಡುವಿನ ಗಲಾಟೆಗೆ ಮೊಸಳೆಗೆ ತುತ್ತಾದ ಮಗು

ಕಾರವಾರ : ಪತಿ ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳದ ಮಧ್ಯದಲ್ಲಿ ಮಾತು ಬಾರದ ತಮ್ಮ ಮಗುವನ್ನೇ ಮೊಸಳೆಗಳು ಇರುವ ನಾಲೆಗೆ ಎಸೆದು ನಂತರ ಪಶ್ಚಾತಾಪ ಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ. ಸಾವಿತ್ರಿ ಎಂಬ ಮಹಿಳೆ ದುಷ್ಕೃತ್ಯವೆಸಗಿದ್ದಾರೆ.

ಮೃತ ೬ ವರ್ಷದ ವಿನೋದ್ ಮಾತು ಬಾರದ ಮಗು. ಇದನ್ನೇ ನೆಪಮಾಡಿಕೊಂಡಿದ್ದ ಗಂಡ ಕುಡಿದು ಹೆಂಡತಿ ಜತೆ ಜಗಳವಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದ. ಹೀಗಾಗಿ ಗಂಡನ ಜತೆ ಗಲಾಟೆಯ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋದ ತಾಯಿ ಸಾವಿತ್ರಿ ನಾಲೆಗೆ ಎಸೆದಿದ್ದಾರೆ.

ನಿನ್ನೆ ರಾತ್ರಿ ಗಂಡ ರವಿಕುಮಾರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ ಸಾವಿತ್ರಿ, ಕೋಪದಲ್ಲಿ ಮಗುವನ್ನ ಮೊಸಳೆಗಳಿದ್ದ ನಾಲೆಗೆ ಎಸೆದು ನಂತರ ಪಶ್ಚಾತಾಪದಿಂದಾಗಿ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಮೊಸಳೆ ಬಾಯಲ್ಲಿ ೬ ವರ್ಷದ ಮಗು ವಿನೋದ್ ಸಾವಿಗೀಡಾಗಿದೆ. ನಿನ್ನೆ ರಾತ್ರಿಯಿಂದ ಶವವನ್ನು ತೆಗೆಯಲು ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದ್ದು, ಕೊನೆಗೂ ಮಗುವಿನ ಮೃತದೇಹ ಸಿಕ್ಕಿದೆ.

ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಸದ್ಯ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular