ಬಳ್ಳಾರಿ: ಗರ್ಭಿಣಿಯರು ಯಾವುದೇ ರೀತಿಯ ನೋವನ್ನು ನಿರ್ಲಕ್ಷಿಸದೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ. ವೈ.ರಮೇಶ್ ಬಾಬು ತಿಳಿಸಿದರು.
ಎಮ್ಮಿಗನೂರು ಗ್ರಾಮಕ್ಕೆ ಕ್ಷೇತ್ರ ಭೇಟಿ ನೀಡಿದ ಸಂದರ್ಭ ಗರ್ಭಿಣಿ ತಾಯಿ ಮನೆಗೆ ಭೇಟಿ ನೀಡಿ ತಾಯಿ ಕಾರ್ಡ್, ತೂಕ, ದೇಹದ ರಕ್ತದ ಪ್ರಮಾಣ ಇತ್ಯಾದಿ ವಿಷಯಗಳ ಕುರಿತು ಮಾತನಾಡಿದರು. ಸಾವನ್ನು ತಡೆಯಲು ಗರ್ಭಿಣಿ ಎಂದು ಗೊತ್ತಾದ ದಿನದಿಂದಲೇ ಅಗತ್ಯ ಪರೀಕ್ಷೆಗಳು, ದೇಹದಲ್ಲಿ ಕಬ್ಬಿಣಾಂಶದ ಮಾತ್ರೆ, ತೂಕ, ರಕ್ತದೊತ್ತಡ, ಎಚ್ ಐವಿ, ಎಚ್ ಬಿಎಸ್ ಎಜಿ ಮುಂತಾದ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಕುಟುಂಬದ ಸದಸ್ಯರಿಗೆ ತಿಳಿವಳಿಕೆ ನೀಡುವುದರ ಜತೆಗೆ ಪ್ರಸ್ತುತ ಸುಡುವ ಬಿಸಿಲಿನಲ್ಲಿ ಗರ್ಭಿಣಿಯರ ಅತ್ಯಂತ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ನೀರು ಕುಡಿಯಲು ಕುಟುಂಬ ಸದಸ್ಯರಿಗೆ ತಿಳಿಸಲಾಯಿತು. ಇವುಗಳ ಜೊತೆಗೆ, ಅವರ ರೋಗಲಕ್ಷಣಗಳು ಮತ್ತು ಅವರ ರೋಗಲಕ್ಷಣಗಳ ಆಧಾರದ ಮೇಲೆ ತಕ್ಷಣ ವೈದ್ಯರನ್ನು ಭೇಟಿ ಮಾಡಲುತಿಳಿಸಲಾಯಿತು.