ಮಂಡ್ಯ: ತಮ್ಮ ಗ್ರಾಮಕ್ಕೆ ಮಳೆ ಬೀಳದ ಹಿನ್ನಲೆ ಮಳೆಗಾಗಿ ಮಂಡ್ಯದ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ಮೌಡ್ಯದ ವಿಶಿಷ್ಟ ಆಚರಣೆ ಮಾಡಲಾಗಿದೆ.
ಹುಡುಗನಿಗೆ ಸೀರೇ ಉಡಿಸಿ ಬಸಪ್ಪನ ವಿಗ್ರಹ ಹಾಗು ನೇಗಿಲನ್ನು ಹಿಡಿದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ.
ಮೆರವಣಿಗೆ ವೇಳೆ ಗ್ರಾಮದ ಪ್ರತಿ ಮನೆಯಿಂದ ದೇವರ ಹೊತ್ತವರ ಮೇಲೆ ನೀರು ಹಾಕಿ ಮಳೆಗೆ ಮನವಿ ಮಾಡಲಾಗಿದೆ.
ಈ ಆಚರಣೆಯಿಂದ ತಮ್ಮೂರಿಗೆ ಮಳೆ ಬರುವುದೆಂದು ಗ್ರಾಮಸ್ಥರ ನಂಬಿಕೆಯಾಗಿದೆ.