Monday, April 21, 2025
Google search engine

Homeರಾಜ್ಯಸಂತ್ರಸ್ತೆ ಎದುರು ರೇವಣ್ಣ ನಿವಾಸಗಳಲ್ಲಿ ಮಹಜರು ನಡೆಸಿದ SIT

ಸಂತ್ರಸ್ತೆ ಎದುರು ರೇವಣ್ಣ ನಿವಾಸಗಳಲ್ಲಿ ಮಹಜರು ನಡೆಸಿದ SIT

ಬೆಂಗಳೂರು: ಹೆಚ್.ಡಿ ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸ್ ಮತ್ತಷ್ಟು ಬಿಗಿಯಾಗ್ತಿದೆ. ಹೊಳೆನರಸೀಪುರ ಬಳಿಕ ಬೆಂಗಳೂರಲ್ಲೂ ಸ್ಥಳ ಮಹಜರು ನಡೆಸಲಾಗುತ್ತಿದೆ. ಬಸವನಗುಡಿಯ ರೇವಣ್ಣ ನಿವಾಸದಲ್ಲಿ SIT ಸ್ಥಳ ಮಹಜರು ನಡೆಸಿದೆ.

ಸಿಐಡಿ ಕಚೇರಿಯಲ್ಲಿ ದಾಖಲಾಗಿರುವ ಕೇಸ್ ಸಂಬಂಧ ಮಹಜರ್ ನಡೆಸಿದ್ದು, ನ್ಯಾಯಾಧೀಶರ ಎದುರು CRPC ೧೬೪ ಅಡಿಯಲ್ಲಿ ಮಹಿಳೆ ಹೇಳಿಕೆ ನೀಡಿದ್ದಾಳೆ. ಹೊಳೆನರಸೀಪುರ ಮಾತ್ರವಲ್ಲದೆ ಬೆಂಗಳೂರಲ್ಲೂ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ಬೆಂಗಳೂರಿನ ನಿವಾಸದಲ್ಲಿ ೧೫ ದಿನ ಕೆಲಸ ಮಾಡಿದ್ದು, ರೇವಣ್ಣರ ಬಸವನಗುಡಿ ನಿವಾಸದಲ್ಲೂ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾಳಂತೆ. ರೇವಣ್ಣ ಬೆಡ್ ರೂಮ್‌ನಲ್ಲಿ ಸಹ ಪರಿಶೀಲನೆ ನಡೆಸಲಾಯಿತು.

RELATED ARTICLES
- Advertisment -
Google search engine

Most Popular