ರಾಮನಗರ: ರಾಮನಗರ ಟೌನಿನ ವಿನಾಯಕ ನಗರದ ನಿವಾಸಿ ಕೃಷ್ಣ ಎನ್. (೪೫ ವ?) ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಹರೆಯ ವಿವರ:- ದುಂಡುಮುಖ, ದೃಡಕಾಯ ಶರೀರ, ಗೋದಿ ಮೈ ಬಣ್ಣ, ೫.೩ ಅಡಿ ಎತ್ತರ, ಎಡಗೈನ ಮುಂಗೈನಲ್ಲಿ ಹಳೆ ಗಾಯದ ಗುರುತು ಇರುತ್ತದೆ ಇವರು ಕಾಣೆಯಾಗುವಾಗ ಸಿಮೆಂಟ್ ಬಣ್ಣದ ಚೆಕ್ಸ್ ಗಳಿರುವ ಅರ್ಧ ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಚೆಕ್ಸ್‌ಗಳಿರುವ ಲುಂಗಿ ಧರಿಸಿರುತ್ತಾರೆ. ಇವರು ಕಂಡು ಬಂದರೆ ಆರಕ್ಷಕ ಉಪ ನಿರೀಕ್ಷಕರು, ರಾಮನಗರ ಪುರ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.