Wednesday, April 23, 2025
Google search engine

Homeರಾಜಕೀಯತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡುವಂತೆ ಹೆಚ್ ಡಿ ರೇವಣ್ಣ ಮೇಲೆ ಒತ್ತಡ: ಹೆಚ್ ಡಿ...

ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡುವಂತೆ ಹೆಚ್ ಡಿ ರೇವಣ್ಣ ಮೇಲೆ ಒತ್ತಡ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈಗ ಎಸ್ಐಟಿ ವಶದಲ್ಲಿರುವ ತಮ್ಮ ಸಹೋದರ ಹೆಚ್ ಡಿ ರೇವಣ್ಣ ಪರ ಮಾತನಾಡಿದರು.

 ರೇವಣ್ಣ ವಿರುದ್ಧ ನೇರವಾಗಿ ಇದುವರೆಗೆ ಒಂದೇ ಒಂದು ದೂರು ಕೂಡ ದಾಖಲಾಗಿಲ್ಲ ಹಾಗಾಗೇ ಮಹಿಳೆ ಅಪಹರಣದ   ಕತೆಯನ್ನು ಸೃಷ್ಟಿಸಲಾಗಿದೆ. ಅಪಹೃತೆ ಎಲ್ಲಿದ್ದಾಳೆ ಅಕೆಯನ್ನು ಎಲ್ಲಿಂದ ಕರೆದುಕೊಂಡು ಬಂದರು, ಕರೆತರುವ ಮುನ್ನ ಸ್ಥಳದ ಮಹಜರ್ ನಡೆಸಲಾಯಿತೇ ಅನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಾಳೇನಹಳ್ಳಿ ತೋಟದ ಮನೆಯಿಂದ ರಕ್ಷಿಸಿದ್ದು ಅಂತ ಹೇಳುತ್ತಿದ್ದಾರೆ, ಅಲ್ಲಿ ಮಹಜರ್ ಮಾಡದ ಎಸ್ಐಟಿ ಅಧಿಕಾರಿಗಳು 36 ಗಂಟೆಗಳ ಕಾಲ ಮಹಿಳೆಯನ್ನು ತಮ್ಮ ಕಚೇರಿ ಕೂಡಿ ಹಾಕುತ್ತಾರೆ, ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಕೆಂಬ ವಿಚಾರ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತನಿಖೆಗೆ ರೇವಣ್ಣ ಸಹಕರಿಸುತ್ತಿಲ್ಲ ಎಂಬ ವಿಷಯ ಮಾಧ್ಯಮಗಳಿಗೆ ಲೀಕ್ ಆಗಿರುವ ಸಂಗತಿಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಒಬ್ಬ ಜವಾಬ್ದಾರಿಯುತ ರಾಜಕೀಯ ಮುಖಂಡನಿಂದ ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡುವಂತೆ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.

RELATED ARTICLES
- Advertisment -
Google search engine

Most Popular