ಮಂಡ್ಯ: ಮರ ಬಿದ್ದು ಸಾವನ್ನಪ್ಪಿದ ಕಾರ್ತಿಕ್ ಕುಟುಂಬಕ್ಕೆ ಶಾಸಕ ಗಣಿಗ ರವಿಕುಮಾರ್ ಸಾಂತ್ವನ ಹೇಳಿದರು.
ಮಂಡ್ಯದ ಶಿಲ್ಪ ನರ್ಸಿಂಗ್ ಹೋಂ ಪಕ್ಕ ರಾತ್ರಿ ಬಾರಿ ಬಿರುಗಾಳಿ ಸಹಿತ ಮಳೆಗೆ ಕಾರಿನ ಮೇಲೆ ಮರ ಬಿದ್ದು ಕಾರ್ತಿಕ್ ಸಾವನ್ನಪ್ಪಿದ್ದನು.
ಇಂದು ಮಂಡ್ಯ ಮಿಮ್ಸ್ ಶವಗಾರಕ್ಕೆ ಶಾಸಕ ಗಣಿಗ ರವಿಕುಮಾರ್ ಭೇಟಿ ನೀಡಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿ ವಯಕ್ತಿಕವಾಗಿ 1 ಲಕ್ಷ ನೆರವು ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ದುರಾದೃಷ್ಟ ಮಳೆಗೆ ಮರಗಳು ಬಿದ್ದಿವೆ. ಬೀಳುವ ಮರಗಳನ್ನ ಕಟ್ ಮಾಡಲು ಅರಣ್ಯ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಮೃತ ಕಾರ್ತಿಕ್ ಕುಟುಂಬಕ್ಕೆ ಸರ್ಕಾರದಿಂದ ಐದು ಲಕ್ಷ ಪರಿಹಾರ ಕೊಡಲಾಗುತ್ತೆ. ನನ್ನ ವಯಕ್ತಿಕವಾಗಿ ಒಂದು ಲಕ್ಷ ರೂ ಕೊಡ್ತಿದ್ದೇನೆ. ಕೆಲವು ಕಡೆ ಮರಗಳು ಒಣಗಿವೆ ತೆರವು ಮಾಡಲು ಸಾರ್ವಜನಿಕರು ಸಹಕರಿಸಿ ಎಂದ ಅವರು, ಮರಗಳು ಎಷ್ಟು ಮುಖ್ಯವೋ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆಕೊಳ್ಳುವುದು ಅಷ್ಟೆ ಮುಖ್ಯ ಎಂದು ಹೇಳಿದರು.