Tuesday, April 22, 2025
Google search engine

Homeರಾಜಕೀಯಪೆನ್ ಡ್ರೈವ್ ಕೇಸ್ ನಲ್ಲಿ ಹಾಸನದ ಮಾಜಿ ಶಾಸಕನ ಕೈವಾಡ ಇದೆ: ಶಾಸಕ ಗಣಿಗ ರವಿಕುಮಾರ್

ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನದ ಮಾಜಿ ಶಾಸಕನ ಕೈವಾಡ ಇದೆ: ಶಾಸಕ ಗಣಿಗ ರವಿಕುಮಾರ್

ಮಂಡ್ಯ:  ಪೆನ್ ಡ್ರೈವ್ ಕೇಸ್ ನಲ್ಲಿ ರಾಜ್ಯಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವ ನಾಯಕ, ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.

ಹಾಸನ ಪೆನ್ ಡ್ರೈವ್ ಡಿಕೆಶಿ ಕೈವಾಡ ಎಂಬ ಆರೋಪದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಡಿಕೆ ಶಿವಕುಮಾರ್ ಮಾಡ್ಸಿದ್ದಾರೆ ಅನ್ನೋದರ ದಾಖಲೆ ಕೊಡಿ. ಡಿಕೆ ಶಿವಕುಮಾರ್ ಹತ್ರ ಸಾವಿರಾರು ಜನ ಬರ್ತಾರೆ.  ಡಿಕೆ ಶಿವಕುಮಾರ್ ಭೇಟಿ ಮಾಡಲು ದೇವರಾಜೇಗೌಡ ಬಿಜೆಪಿಯ ಮಾಜಿ ಶಾಸಕ ಇವರೇ ಯಾಕೆ ಷಡ್ಯಂತ್ರ ಹೂಡಿರಬಾರದು? ಈ ಸಂಬಂಧ ದಾಖಲೆ ಇದಿಯಾ.? ದೇವರಾಜೇಗೌಡ, ಶಿವರಾಮೇಗೌಡ ಇಬ್ಬರು ಇರಬಹುದಲ್ವಾ. ಶಿವರಾಮೇಗೌಡರನ್ನ ಕಳುಹಿಸಿ ಯಾಕೆ ಷಡ್ಯಂತ್ರ ಹೂಡಿರಬಾರದು ಎಂದು ಕಿಡಿಕಾರಿದರು.

ದೇವರಾಜೇಗೌಡ ಬಿಜೆಪಿಯ ಡಿಫಿಟೆಟ್ ಕೆಂಡೆಟ್ ಡಿಕೆ ಮೀಟ್ ಮಾಡಬೇಕು ಅಂತ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಸ್ಟೇ ತಂದಾಗ ಇದೇ ದೇವರಾಜೇಗೌಡ ಹಾಸನದಲ್ಲಿ ಏನು ಹೇಳಿದ್ರು. ನಿನ್ನ ಸ್ಟೇ ವೆಕಾಟ್ ಇದೆ ಎಲ್ಲವನ್ನ ಬಿಡ್ತಿನಿ ಅಂತ ಹೇಳಿದ್ದಾರೆ. ಒಂದು ತಿಂಗಳ ದೇವರಾಜೇಗೌಡ ಸ್ಟೇಟ್ಮೇಂಟ್ ನೋಡಿ ಎಂದರು.

ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನದ ಮಾಜಿ ಶಾಸಕನ‌ ಕೈವಾಡ ಇದೆ. ಅವರೇ ಕೋಟ್ಯಾಂತರ ರೂ ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ. ರೇವಣ್ಣ ಕುಟುಂಬದ ಜೊತೆ ರಾಜಕೀಯ ವಿರೋಧಿ ಇದ್ದಾರೆ ಅವರೇ ಷಡ್ಯಂತ್ರ ಮಾಡಿರೋದು. ಈಗ ಡಿಕೆ ಶಿವಕುಮಾರ್ ಮೇಲೆ ಹೇಳ್ತಿದ್ದಾರೆ. ರಾಜ್ಯಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವರು. ಹಾಸನದ ಮಾಜಿ ಶಾಸಕರು ಶಾಮೀಲಾಗಿ ಪೆನ್ ಡ್ರೈ ಹಂಚಿದ್ದಾರೆ ಎಂದರು.

ಮೊಸರು ತಿಂದು ಮೇಕೆ ಬಾಯಿಗೆ ಹೊರಸಿದ ಹಾಗೆ ಮಾಡ್ತಿದ್ದಾರೆ. ದೇವರಾಜೇಗೌಡನ ಪೋನ್ ಕಾಲ್ ಟ್ರ್ಯಾಪ್ ಮಾಡಿದ್ರೆ ಎಲ್ಲ ಗೊತ್ತಾಗುತ್ತೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಇದಕ್ಕೆ ನೇರ ಹೊಣೆ ಜೆಡಿಎಸ್ ಮಟ್ಟ ಹಾಕಲು ಬಿಜೆಪಿ ಸ್ಟೈಲ್ ಎಂದು ತಿಳಿಸಿದರು.

ಪವರ್ ಪುಲ್ ಪೀಪಲ್ ಆಗಿರೋದ್ರಿಂದ ಡಿಕೆಶಿ ತಲೆಗೆ ಕಟ್ಟಲು ನೋಡ್ತಿದ್ದಾರೆ. ಇದಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧ ಇಲ್ಲ. ಕರ್ನಾಟಕ ಪೋಲಿಸ್ ಎಸ್ಐಟಿ ಅಧಿಕಾರಿಗಳು ದಕ್ಷರಿದ್ದಾರೆ ಎಲ್ಲವನ್ನೂ ಹೊರ ತರ್ತಾರೆ. ಪೆನ್ ಡ್ರೈ ಬಿಡುಗಡೆ ಮಾಡಿದ್ದೇ ದೇವರಾಜೇಗೌಡ ಅದನ್ನ ಮಾರ್ಕೆಟ್ ಮಾಡಿದ್ದು ಬಿಜೆಪಿಯವರು. ದೇವೇಗೌಡ್ರು ಕುಟುಂಬ, ಕುಮಾರಣ್ಣನ ರಾಜಕೀಯವಾಗಿ ಮುಗಿಸಲು ಬಿಜೆಪಿ ಹೀಗೆ ಮಾಡ್ತಿದೆ. ಜೆಡಿಎಸ್ ಮುಗಿಸಿ ಬಿಜೆಪಿ ಭದ್ರಕೋಟೆ ನಿರ್ಮಿಸಿಕೊಳ್ಳುತ್ತೆ ಎಂದರು.

RELATED ARTICLES
- Advertisment -
Google search engine

Most Popular