Monday, April 21, 2025
Google search engine

Homeಅಪರಾಧಇವಿಎಂ ತಡವಾಗಿ ಬಂದಿದ್ದಕ್ಕೆ ಮತಯಂತ್ರಕ್ಕೆ ಬೆಂಕಿ ಹಚ್ಚಿದ ಮತದಾರ

ಇವಿಎಂ ತಡವಾಗಿ ಬಂದಿದ್ದಕ್ಕೆ ಮತಯಂತ್ರಕ್ಕೆ ಬೆಂಕಿ ಹಚ್ಚಿದ ಮತದಾರ

ಮುಂಬೈ: ಮತಯಂತ್ರವನ್ನು ಮತಗಟ್ಟೆಗೆ ತರುವುದು ತಡವಾಗಿದ್ದರಿಂದ ಕೋಪಗೊಂಡ ಮತದಾರ ಪೆಟ್ರೋಲ್ ತಂದು ಇವಿಎಂಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲೂಕಿನ ಬಾದಲವಾಡಿಯಲ್ಲಿ ನಡೆದಿದೆ.

ಚುನಾವಣಾ ಅಧಿಕಾರಿಗಳು ಆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾದ ಲೋಕಸಭಾ ಕ್ಷೇತ್ರದ ಸಂಗೋಳ ತಾಲೂಕಿನ ಬಾಗಲವಾಡಿಯ ಮತಗಟ್ಟೆಯಲ್ಲಿ ಮತದಾರನೊಬ್ಬ ಇವಿಎಂ ಯಂತ್ರಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಸೊಲ್ಲಾಪುರ ಪೊಲೀಸ್ ವರಿಷ್ಠಾಧಿಕಾರಿ ಶಿರೀಶ ದೇಶಪಾಂಡೆ ಮತಗಟ್ಟೆಗೆ ಭೇಟಿ ನೀಡಿದರು. ಸಂಗೋಳ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ. ಬೆಂಕಿ ಹಚ್ಚಲು ಬಂದಿದ್ದ ಯುವಕ ಮರಾಠರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದನು. ಅಷ್ಟೇ ಅಲ್ಲ, ಮತಗಟ್ಟೆಯಲ್ಲಿ ಅಳವಡಿಸಿರುವ ಮತಯಂತ್ರವೂ ಬೋಗಸ್ ಎಂದು ಯುವಕ ಆರೋಪಿಸಿದ್ದಾನೆ. ಈ ವೇಳೆ ಯುವಕ ಮತಯಂತ್ರಕ್ಕೆ ಪೆಟ್ರೋಲ್ ಸುರಿದು ಸುಡಲು ಯತ್ನಿಸಿದ್ದಾನೆ. ಆದರೆ, ಅಧಿಕಾರಿಗಳು ಆ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ.

RELATED ARTICLES
- Advertisment -
Google search engine

Most Popular