ಪಿರಿಯಾಪಟ್ಟಣ: ಲಾರಿ ಚಾಲಕ ವೃತ್ತಿ ಮಾಡಿಕೊಂಡು ಪಂಚವಳ್ಳಿ ಗ್ರಾಮದಲ್ಲಿ ವಾಸವಿದ್ದ ಮೂಲತಹ ಹುಣಸೂರು ತಾಲೂಕು ಮೂದೂರು ಎಂ ಕೊಪ್ಪಲು ಗ್ರಾಮದ ಆನಂದ್ ಕುಮಾರ್ (೩೩) ನಾಪತ್ತೆಯಾಗಿದ್ದಾರೆ.
ಕಳೆದ ಜುಲೈ ತಿಂಗಳಿನಿಂದ ಪತ್ನಿ ಮನೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನಗಳ್ಳಿ ಕೊಪ್ಪಲಿನಲ್ಲಿದ್ದ ಆನಂದ್ ಕುಮಾರ್ ಬಳ್ಳಾರಿಯಲ್ಲಿ ಕೋರ್ಟ್ ಕೇಸಿದೆ ಹೋಗಿ ಬರುತ್ತೇನೆ ಎಂದು ಕಳೆದ ಆಗಸ್ಟ್ ತಿಂಗಳಿನ ೧೧ನೇ ತಾರೀಕಿನಂದು ಮನೆಯಿಂದ ಹೊರ ಹೋದವರು ಇನ್ನೂ ವಾಪಸ್ ಬಂದಿಲ್ಲ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇವೆ ಎಂದು ಆತನ ಪತ್ನಿ ಶೃತಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿ ಚಹರೆ: ಕಪ್ಪು ಬಣ್ಣ ತೆಳ್ಳಗಿನ ಶರೀರ ಎಡ ಎದೆಯ ಮೇಲೆ ಅಶ್ವಿನಿ ಎಂದು ಹಸಿರು ಹಚ್ಚೆ ಗುರುತು ಇರುತ್ತದೆ ಕನ್ನಡ ತಮಿಳು ಮಲೆಯಾಳಿ ಮಾತನಾಡುವ ಈ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಪಿರಿಯಾಪಟ್ಟಣ ಆರಕ್ಷಕ ಠಾಣೆ ದೂರವಾಣಿ ಸಂಖ್ಯೆ ೦೮೨೨೩-೨೭೩೧೦೦ ಅಥವಾ ಹತ್ತಿರದ ಆರಕ್ಷಕ ಠಾಣೆಗೆ ಮಾಹಿತಿ ನೀಡುವಂತೆ ಇನ್ಸ್ಪೆಕ್ಟರ್ ರಾಘವೇಂದ್ರ ಕೋರಿದ್ದಾರೆ