Monday, April 21, 2025
Google search engine

Homeರಾಜ್ಯಎಸ್ ಎಸ್ ಎಲ್ ಸಿ ಫಲಿತಾಂಶ: ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್

ಎಸ್ ಎಸ್ ಎಲ್ ಸಿ ಫಲಿತಾಂಶ: ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್

ಮಂಡ್ಯ: ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರ್ಕಾರಿ ಹಾಸ್ಟೆಲ್‌ ನಲ್ಲಿ ಓದಿದ ಮಂಡ್ಯ ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾನೆ.

ಮಂಡ್ಯ ತಾಲ್ಲೂಕಿನ ಕನ್ನಲಿ ಗ್ರಾಮದ ಚನ್ನೇಗೌಡ, ವೆಂಕಟಲಕ್ಷ್ಮಮ್ಮ ದಂಪತಿಯ ಪುತ್ರ ನವನೀತ್, ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿ.

ತೂಬಿನಕೆರೆಯ ಮೂರಾರ್ಜಿ‌ ವಸತಿ ಶಾಲೆಯಲ್ಲಿ ನವನೀತ್ ವ್ಯಾಸಂಗ ಮಾಡಿದ್ದು, 625 ಕ್ಕೆ 623 ಅಂಕ ಪಡೆದಿದ್ದಾನೆ.

ಕಷ್ಟದ ನಡುವೆಯೂ ಮಗನಿಗೆ ಬೆಂಬಲವಾಗಿ ಪೋಷಕರು ನಿಂತಿದ್ದರು. ಆರನೇ ತರಗತಿಯಿಂದ ಎಸ್ ಎಸ್ ಎಲ್ ಸಿ ವರೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನವನೀತ್ ವ್ಯಾಸಂಗ ಮಾಡುತ್ತಿದ್ದಾನೆ.

ಕನ್ನಡದಲ್ಲಿ 125, ಇಂಗ್ಲೀಷ್ ಮತ್ತು ಹಿಂದಿ, ಗಣಿತದಲ್ಲಿ 100 ಅಂಕ, ಸಮಾಜ ವಿಜ್ಞಾನದಲ್ಲಿ ಹಾಗೂ ವಿಜ್ಞಾನದಲ್ಲಿ ತಲಾ 99 ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ನವನೀತ್ ಕೀರ್ತಿ ತಂದಿದ್ದಾನೆ.

RELATED ARTICLES
- Advertisment -
Google search engine

Most Popular