Sunday, April 20, 2025
Google search engine

HomeUncategorizedರಾಷ್ಟ್ರೀಯಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ​ನಲ್ಲಿ 4.3 ತೀವ್ರತೆಯ ಭೂಕಂಪ

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ​ನಲ್ಲಿ 4.3 ತೀವ್ರತೆಯ ಭೂಕಂಪ

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬೆಳಗ್ಗೆ 7.15ರ ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ತಕ್ಷಣವೇ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

ಕಾರ್ಗಿಲ್‌ ನಲ್ಲಿ ಹಠಾತ್ತನೆ ಹವಾಮಾನ ಹದಗೆಟ್ಟಿತು. ಯಾವುದೇ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟದ ಸುದ್ದಿ ಬಾರದಿದ್ದರೂ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಭೂಕಂಪಗಳು ಕಂಡುಬರುತ್ತಿವೆ. ಮೇ 1 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಮಧ್ಯರಾತ್ರಿ ಭೂಕಂಪದ ಅನುಭವವಾಗಿತ್ತು.

ಆ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ 3.4 ರ ತೀವ್ರತೆ ಕಂಡುಬಂದಿತ್ತು. ಬುಧವಾರ ರಾತ್ರಿ 1:33ಕ್ಕೆ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.

ಏಪ್ರಿಲ್ 19 ರ ಬೆಳಿಗ್ಗೆ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಮತ್ತು ಲಡಾಖ್‌ ನಲ್ಲಿ ಭೂಕಂಪನದ ಅನುಭವವಾಯಿತು. ಆ ಸಮಯದಲ್ಲಿ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.0 ಎಂದು ಅಳೆಯಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿರುವುದರಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

RELATED ARTICLES
- Advertisment -
Google search engine

Most Popular