ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಅಧಿಕಾರಿಗಳ ಮುಂದೆಯೇ ಬಡ ರೈತನಿಗೆ ರೌಡಿ ಶೀಟರ್ ಕೊಲೆ ಬೆದರಿಕೆ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ಜಮೀನು ವಾಜ್ಯದ ವಿಚಾರವಾಗಿ ರೈತನ ಜಮೀನಿಗೆ ಪರಿಶೀಲನೆ ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಂದಿದ್ದು, ಈ ವೇಳೆ ಜಮೀನಿನ ರೈತ ರುದ್ರೇಶನಿಗೆ ರೌಡಿ ಶೀಟರ್ ಗೋವಿಂದರಾಜ್ ಅಧಿಕಾರಿಗಳ ಮುಂದೆಯೇ ಕೊಲೆ ಬೆದರಿಕೆ ಹಾಕಿದ್ದಾನೆ.

ರೌಡಿ ಶೀಟರ್ ನ ಕೊಲೆ ಬೆದರಿಕೆಗೆ ಹೆದರಿ ತಣ್ಣಗಾದ ಅಧಿಕಾರಿಗಳು ಪರಿಶೀಲನೆ ನಡೆಸದೆ ವಾಪಸ್ಸಾಗಿದ್ದಾರೆ.
ಜೀವ ಭಯದಲ್ಲಿ ಜಮೀನಿನ ಮಾಲೀಕ ರುದ್ರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ರೌಡಿ ಶೀಟರ್ ವಿರುದ್ಧ ದೂರು ಕೊಟ್ಟರು ಪೊಲೀಸರು ಕ್ರಮ ಕೈಗೊಂಡಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ರೈತ ಕುಟುಂಬ ಕಂಗಾಲಾಗಿದ್ದಾನೆ.
ರೌಡಿ ಶೀಟರ್ ನ ವಿರುದ್ಧ ಕ್ರಮ ಜರುಗಿಸಿ ಬದುಕಲು ಅವಕಾಶ ಮಾಡಿಕೊಡಿ. ಇಲ್ಲವೇ ನಮ್ಮ ಕುಟುಂಬದ ದಯಾ ಮರಣಕ್ಕೆ ಅವಕಾಶ ಕೊಡುವಂತೆ ಕುಟುಂಬದಿಂದ ಎಸ್ಪಿಗೆ ಮನವಿ ಸಲ್ಲಿಸಲಾಗಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.