ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಸ್ಥಳೀಯ ಬೇಕರಿ ಉದ್ಯಮಿಗಳು ಹಾಗೂ ಇತರೆ ಸಣ್ಣ ಉದ್ಯಮಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಉದ್ದೇಶಕ್ಕಾಗಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ) ವತಿಯಿಂದ ಮೇ 11 ಮತ್ತು 12ರಂದು ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್‌ನ ಮೂರನೇ ಮಹಡಿಯಲ್ಲಿ ಐದನೇ ಆವೃತ್ತಿಯ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿಕೋ ಉಪನ್ಯಾಸಕರು ಮತ್ತು ಶೈಕ್ಷಣಿಕ ಆಯೋಜಕ ಡಾ.ಅನೀಶ ನಿಶಾಂತ್ ಅವರು ಮೇ 11ರಂದು ಮಧ್ಯಾಹ್ನ 12ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಯಾಗಿ ದಿ ಓಷನ್ ಪರ್ಲ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ದುರೈ ಅರುಣ್ ಪ್ರಸಾಂತ್ ಸೆಲ್ವಂ ಭಾಗವಹಿಸಲಿದ್ದಾರೆ ಅಂದರು.