Wednesday, November 19, 2025
Google search engine

Homeರಾಜ್ಯಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ: ಕೆ ಜೆ ಜಾರ್ಜ್ ಸ್ಪಷ್ಟನೆ

ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ: ಕೆ ಜೆ ಜಾರ್ಜ್ ಸ್ಪಷ್ಟನೆ

ರಾಯಚೂರು: ನನಗೆ ಗೊತ್ತಿರುವ ಹಾಗೆ ಯಾವುದೇ ಲೋಡ್​ ಶೆಡ್ಡಿಂಗ್ ಇಲ್ಲ. ಪರೀಕ್ಷೆ ಹಾಗೂ ಚುನಾವಣೆ ವೇಳೆ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈಗ ಮೈಂಟೇನೆನ್ಸ್ ​ಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಕರೆಂಟ್ ಶಾರ್ಟೇಜ್ ಆಗಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದಲ್ಲಿ 200 ಯುನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದ ಲೋಡ್​ ಶೆಡ್ಡಿಂಗ್  ಶುರುವಾಗಿದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಂದು ರಾಯಚೂರಿನಲ್ಲಿ ಇಂದು ಮಾಧ್ಯಮಗಳಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಇದೇ ವೇಳೆ ಜೆಸ್ಕಾ ಇಂಜಿನಿಯರ್ ​ಗಳನ್ನು ತರಾಟೆಗೆ ತೆಗೆದುಕೊಂಡ ಕೆಜೆ ಚಾರ್ಜ್, ನಾನೇನು ಹೊಸದಾಗಿ ಮಂತ್ರಿಯಾಗಿಲ್ಲ. ಓವರ್ ಲೋಡ್ ಕಡಿಮೆ ಮಾಡಲು ಏನ್ ಮಾಡುತ್ತೀರಿ. ನಿಮ್ಮ ಕೈಲಾಗದೇ ಇದ್ದರೆ ಹೆಡ್ ಆಫೀಸ್ ಗೆ ಹೇಳಿ. ಅದನ್ನು ಬಿಟ್ಟು ಜನರಿಗೆ ತೊಂದರೆಕೊಡಬೇಡಿ ಎಂದರು.

ಇದೇ ವೇಳೆ ವಿದ್ಯುತ್ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ್ದು,ವಿದ್ಯುತ್ ದರ ಹೆಚ್ಚಿಸಿದ್ದು ಯಾರು? ನಾಲ್ಕು ವರ್ಷ ಯಾರು ಸರ್ಕಾರ ನಡೆಸಿದ್ದು? ಕರೆಂಟ್ ಬಿಲ್ ಕೇಂದ್ರ ಸರ್ಕಾರದ ಕಾಯ್ದೆಯಡಿ‌ ಹೆಚ್ಚಾಗಿದೆ. ನವೆಂಬರ್ ಅಲ್ಲಿ ಕರ್ನಾಟಕ ಇಲೆಕ್ಟ್ರಿಕ್ ಸಿಟಿ ರೆಗ್ಯುಲೇಟರಿ ಅಥಾರಿಟಿ ಕಮಿಷನ್ ಇದನ್ನ ತೆಗೆದುಕೊಂಡಿದ್ದಾರೆ. ಎಸ್ಕಾಂಗಳು,ಇಂಡಸ್ಟ್ರಿ ಅವರು ಸಂಪರ್ಕಿಸಿದ್ದಾರೆ. ಅವರು (ಬಿಜೆಪಿ) ಮಾರ್ಚ್ ನಲ್ಲಿ ತೀರ್ಮಾನಿಸಬೇಕಿತ್ತು.. ಚುನಾವಣೆ ಅಂತ ಮೇ 12 ಕ್ಕೆ ಆದೇಶಿಸಿದ್ದಾರೆ. ಆಗ ಯಾವ ಸರ್ಕಾರ ಇತ್ತು ಎಂದು ಪ್ರಶ್ನಿಸಿದರು.

ಅದಾನಿ ಅವರಿಗೆ ಬ್ಲೆಂಡಿಂಗ್ ಮಾಡಲು ಕೇಂದ್ರ ಸರ್ಕಾರ ಆದೇಶ ಕೊಟ್ಟಿದೆ. ಬ್ಲೆಂಡಿಂಗ್ ಮಾಡೋವಾಗ ಅಂತಾರಾಷ್ಟ್ರೀಯ ದರ ಜಾಸ್ತಿ ಇತ್ತು. ಬ್ಲೆಂಡ್ ಮಾಡುವಾಗ ಹೆಚ್ಚಾಯ್ತು. ಈ ಹೆಚ್ಚಳವನ್ನ ರೆಗ್ಯುಲೇಟರಿ ಅಥಾರಿಟಿ ಜಾಸ್ತಿ ಮಾಡಿದ್ದಾರೆ. ಇದು ನಮ್ಮ ಕಾಲದಲ್ಲಿ ಮಾಡಿರುವುದಲ್ಲ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular