Sunday, April 20, 2025
Google search engine

Homeಸ್ಥಳೀಯಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ತತ್ವ ಆದರ್ಶಗಳನ್ನು ಅನುಸರಿಸಿ: ಚಂದ್ರಶೇಖರ್

ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ತತ್ವ ಆದರ್ಶಗಳನ್ನು ಅನುಸರಿಸಿ: ಚಂದ್ರಶೇಖರ್

ರಾಮನಗರ: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಜೀವನವೇ ಉತ್ತಮ ಸಂದೇಶವಾಗಿದೆ. ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಮಾದರಿಯಾಗಿರುವ ಹೇಮರೆಡ್ಡಿ ಮಲ್ಲಮ್ಮ ಅವರು ಎಲ್ಲರಿಗೂ ದಾರಿ ದೀಪವಾಗಿದ್ದಾರೆ. ಇವರ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕಿದೆ ಎಂದು ಚಂದ್ರಶೇಖರ್ ರವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಮೌಲ್ಯಗಳನ್ನು ಇಂದಿನ ಪೀಳಿಗೆಯವರು ಅನುಸರಿಸಬೇಕಾದ ಅಗತ್ಯವಿದೆ. ಎಲ್ಲರಿಗೂ ಒಳಿತನ್ನು ಬಯಸಿದ ಮಲ್ಲಮ್ಮ ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರರಾದ ರಮೇಶ್ ಬಾಬು, ಜಿಲ್ಲಾಧಿಕಾರಿಯ ಕಚೇರಿಯ ಸಹಾಯಕರಾದ ಜಯಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ ಕೆ.ಜೆ, ಸಮುದಾಯದ ಮುಂಖಡರುಗಳಾದ ಶಾರದಾ, ವಸಂತ, ವನಮೇಲಮ್ಮ ಹಾಗೂ ಇತರರು ಉಪಸಿತ್ಥರಿದ್ದರು.

RELATED ARTICLES
- Advertisment -
Google search engine

Most Popular