Monday, April 21, 2025
Google search engine

Homeರಾಜ್ಯಸುದ್ದಿಜಾಲವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ ನಿಧನ

ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ ನಿಧನ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗಾಂಧಿವಾದಿ ಎಂದೇ ಪ್ರಸಿದ್ಧಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ (೯೪) ಮೈಸೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಮೂವರು ಪುತ್ರರಿದ್ದಾರೆ. ಇತ್ತೀಚಿಗೆ ಮನೆಯಲ್ಲಿ ಕಾಲುಜಾರಿ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು ಮೈಸೂರು ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಟಿ.ಕೆ.ಚಿನ್ನಸ್ವಾಮಿ ಅವರು ಮೂಲತಃ ಕೊಡಗು ಜಿಲ್ಲೆಯ ತೊರೆನೂರು ಗ್ರಾಮದವರಾಗಿದ್ಸು. ಇವರು ಕೆ.ಆರ್.ನಗರದ ಮಳಲಿ ಗ್ರಾಮದ ಸೋದರ ಮಾವನ ಮನೆಯಲ್ಲಿ ಶಿಕ್ಷಣವನ್ನು ಮುಗಿಸಿದ ಇವರು ಮೊದಲು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಮುಂಬಡ್ತಿ ಪಡೆದು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಆನಂತರ ಸರ್ಕಾರಿ ನೌಕರರ ಸಂಘದ ನಿರ್ಧೆಶಕರಾಗಿ ಮತ್ತು ವಿವಿದ ಸಂಘ ಸಂಸ್ಥೆಗಳ ಮೂಲಕ ಹೋರಾಟ ಮಾಡಿದ್ದರು.

೧೯೮೮ರಲ್ಲಿ ವಿಧಾನ ಪರಿಷತ್ ಗೆ ನಡೆದ ದಕ್ಷಿಣ ಪದವೀಧರ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್‌ಗೆ ಪ್ರವೇಶ ಮಾಡಿದರು. ೧೯೮೮ ರಿಂದ ೧೯೯೪ ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಸಮೂಹದ ಪರವಾಗಿ ಹೋರಾಟ ಮಾಡಿದ್ದರು.

ಪ್ರಸ್ತುತ ಕೆ.ಆರ್.ನಗರ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಸಂಸ್ಥಾಪಕರಾಗಿ ಹಾಗೂ ಎಡತೊರೆ ಬಲಿಜ (ಬಣಜಿಗ) ಸಂಘದ ಮಹಾ ಪೋಷಕರಾಗಿ ಸೇವೆ ಆರಂಬಿಸಿದ ಇವರು ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಇವರು ಉದ್ಯಾನವನದ ಅಭಿವೃದ್ಧಿ ಸೇರಿದಂತೆ ಅನೇಕ ಬೆಂಚ್ ಗಳನ್ನು ಹಾಕಿಸಿ ಹಿರಿಯ ನಾಗರೀಕರ ವಾಯು ವಿಹಾರಕ್ಕೆ ಪೂರಕವಾಗಿ ಉದ್ಯಾನವನ ಅಭಿವೃದ್ಧಿ ಪಡಿಸುವಲ್ಲಿ ತಮ್ಮದ ಆದ ಬಳಗವನ್ನು ಹೊಂದಿದ್ದರು.

ಇವರ ಅಂತಿಮ ದರ್ಶನವನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್, ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಸೂರು ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷ ನರಸಿಂಹರಾಜು, ಮಾಜಿ ಸದಸ್ಯರಾದ ನಾಗರತ್ನಮ್ಮ, ಕೆ.ಬಿ.ಸುಬ್ರಹ್ಮಣ್ಯ, ತಾ.ಜಾದಳ ವಕ್ತಾರ ಕೆ.ಎಲ್.ರಮೇಶ್, ತಾಲ್ಲೂಕು ಎಡತೊರೆ ಬಲಿಜ(ಬಣಜಿಗ) ಸಂಘದ ಅಧ್ಯಕ್ಷ ಟಿ.ಎನ್, ದಯಾನಂದ್, ಉಪಾಧ್ಯಕ್ಷ ರಘುನಾಥ್, ಪ್ರಧಾನ ಕಾರ್ಯದರ್ಶಿ ಮಳಲಿ ರಾಘು, ಖಜಾಂಚಿ ಅನ್ನಪೂರ್ಣ, ಹಿರಿಯ ಪತ್ರಕರ್ತ ಭೇರ್ಯಮಹೇಶ್, ವಕೀಲ ನಾಗೇಶ್, ಸಾಹಿತಿ ಹೆಗ್ಗಂದೂರು ಪ್ರಭಾಕರ್, ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಣ್ಣಲಿಂಗಪ್ಪ, ನಿರ್ಧೆಶಕರಾದ ಟಿ.ಎಸ್.ಭಾಗೀರಥಿ, ಗೋಪಮ್ಮ, ಚಂದ್ರಶೇಖರ್, ತಿಮ್ಮೇಗೌಡ, ಎಸ್.ವಿ.ಶ್ರೀನಿವಾಸ್ ಮೊದಲಾದವರು ಮೃತರ ಅಂತಿಮ ದರ್ಶನ ಪಡೆದರು.

RELATED ARTICLES
- Advertisment -
Google search engine

Most Popular