Monday, April 21, 2025
Google search engine

Homeಅಪರಾಧಮಡಿಕೇರಿ: ಮೀನಾ ಹಂತಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಮಡಿಕೇರಿ: ಮೀನಾ ಹಂತಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕೊಡಗು: ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿರುವ ಹಂತಕ ಪ್ರಕಾಶ್(೩೫) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆರೋಪಿ ಕೊಲೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಶೋಧಕಾರ್ಯ ಮಾಡುವ ಸಮಯದಲ್ಲಿ ಸೂರ್ಲಬ್ಬಿ ಗ್ರಾಮದಿಂದ ೩ ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ. ಇನ್ನು ಬಾಲಕಿಯ ರುಂಡಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಅಪ್ರಾಪ್ತ ಬಾಲಕಿಯನ್ನು ವಿವಾಹ ಮಾಡುವದಕ್ಕೆ ಪೋಷಕರು ಮುಂದಾಗಿದ್ದು, ಹಂತಕನ ಜೊತೆ ಎಂಗೇಜ್ಮೆಂಟ್ ಮಾಡುವ ವೇಳೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಮೇ.೯ ರಂದು ತಡೆದಿದ್ದರು. ಅಪ್ರಾಪ್ತೆಯನ್ನು ಈಗಲೇ ಮದುವೆ ಮಾಡಬೇಡಿ ಎಂದು ಅಧಿಕಾರಿಗಳು ಬಾಲಕಿಯ ಪೋಷಕರಿಗೆ ಮನವರಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಬಾಲಕಿಯ ಮನಗೆ ನುಗ್ಗಿ ಆಕೆಯನ್ನು ಅಪಹರಿಸಿದ್ದಾನೆ. ಮಾರನೇ ದಿನ ಗ್ರಾಮದ ಪಕ್ಕದ ಅರಣ್ಯದ ಬಳಿ ಬಾಲಕಿಯ ರುಂಡವಿಲ್ಲದ ದೇಹ ಪತ್ತೆಯಾಗಿತ್ತು.

RELATED ARTICLES
- Advertisment -
Google search engine

Most Popular