Sunday, April 20, 2025
Google search engine

Homeರಾಜ್ಯಸುದ್ದಿಜಾಲವಚನಗಳ ಮೂಲಕ ಲೋಕದ ಅಂಕು ಡೊಂಕುಗಳನ್ನು ತಿದ್ದಿದ ಬಸವಣ್ಣ ಇಂದಿಗೂ ಅಜರಾಮರ: ಶಾಸಕ ಡಿ.ರವಿಶಂಕರ್

ವಚನಗಳ ಮೂಲಕ ಲೋಕದ ಅಂಕು ಡೊಂಕುಗಳನ್ನು ತಿದ್ದಿದ ಬಸವಣ್ಣ ಇಂದಿಗೂ ಅಜರಾಮರ: ಶಾಸಕ ಡಿ.ರವಿಶಂಕರ್


ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ತತ್ವ ಮತ್ತು ಆದರ್ಶಗಳು ಸಾರ್ವಕಾಲಿಕವಾಗಿದ್ದು ಇವುಗಳನ್ನು ಯುವ ಜನತೆ ಪಾಲನೆ ಮಾಡಿದಾಗ ಮಾತ್ರ ಅವರ ಆಶಯಗಳು ಈಡೇರಲು ಸಾಧ್ಯ ಎಂದು ಶಾಸಕಡಿ.ರವಿಶಂಕರ್ ಹೇಳಿದರು.

ಪಟ್ಟಣದ ಬಸವೇಶ್ವರ ಬಡಾವಣೆಯ ಮಲೇ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ವೀರಶೈವ ಸಮಾಜದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಚನಗಳ ಮೂಲಕ ಲೋಕದ ಅಂಕು ಡೊಂಕುಗಳನ್ನು ತಿದ್ದಿದ ಬಸವಣ್ಣ ಇಂದಿಗೂ ಅಜರಾಮರ ಎಂದರು. ೮೦೦ ವರ್ಷಗಳ ಹಿಂದೆಯೆ ಸಮಾಜದಲ್ಲಿ ಮಹಿಳೆಯರಿಗೆ ಪುರುಷರಷ್ಠೆ ಸಮಾನತೆ ಮತ್ತು ಗೌರವ ಸಿಗಬೇಕು ಎಂದು ಪ್ರತಿಪಾದನೆ ಮಾಡಿದ್ದ ಬಸವಣ್ಣನವರು ಮೀಸಲಾತಿಯ ಪರಿಕಲ್ಪನೆಯನ್ನು ಎಂದೇ ಜಾರಿಗೆ ತಂದಿದ್ದರು ಇಂತಹಾ ಮಹಾತ್ಮರು ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವುದರ ಜತೆಗೆ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಅವರ ಭಾವಚಿತ್ರ ಇಡುವಂತೆ ಆದೇಶ ಮಾಡಿದೆ ಇದು ನಾವು ಬಸವಣ್ಣನವರಿಗೆ ಸಲ್ಲಿಸಿದ ಗೌರವವಾಗಿದೆ ಎಂದು ತಿಳಿಸಿದರು.

ವಿದಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ ಈ ಹಿಂದೆ ನಾನು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಶಿಕ್ಷಣ ಸಚಿವನಾಗಿದ್ದಾಗ ಅಕ್ಷರ ದಾಸೋಹ ಯೋಜನೆಯನ್ನು ಜಾರಿಗೆ ತರಲು ಬಸವೇಶ್ವರರೆ ಪ್ರೇರಣೆಯೇ ಕಾರಣ ಎಂದರು. ಪ್ರಸ್ತುತ ಚುನಾಯಿತ ಜನ ಪ್ರತಿನಿಧಿಗಳು ಬಸವೇಶ್ವರರ ಕಾಯಕ ತತ್ವಕ್ಕೆ ವಿರುದ್ದವಾಗಿದ್ದು ಭವಿಷ್ಯದಲ್ಲಿ ಎಲ್ಲರೂ ಆ ತಪ್ಪನ್ನು ತಿದ್ದಿಕೊಂಡು ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ದುಡಿಯಬೇಕು ಎಂದು ಹೇಳಿದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ ಸದಸ್ಯ ಕೆ.ಪಿ.ಪ್ರಭುಶಂಕರ್, ಮಲೆ ಮಹದೇಶ್ವರ ಯುವ ಸೇನೆ ಅಧ್ಯಕ್ಷ ಬೋಜರಾಜು, ಸಾಹಿತಿ ಹೆಗ್ಗಂದೂರುಪ್ರಭಾಕರ್, ತಾಲೂಕು ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಸಣ್ಣಲಿಂಗಪ್ಪ, ವೀರಶೈವ ಮುಖಂಡರಾದ ಎಸ್‌ವಿಎಸ್ ಸುರೇಶ್, ಮನೋಹರಿ, ಎಲ್.ಪಿ.ರವಿಕುಮಾರ್, ಲಾಳನಹಳ್ಳಿಮಹೇಶ್, ರೂಪಸತೀಸ್ ಮತ್ತಿತರರು ಇದ್ದರು.

ವೀರಶೈವ ಸಮಾಜದ ವತಿಯಿಂದ ನಡೆದ ಬಸವ ಜಯಂತಿ : ಪಟ್ಟಣದ ಬಸವೇಶ್ವರ ಬಡಾವಣೆಯ ಶ್ರೀ ಮಲೇ ಮಹದೇಶ್ವರ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವೀರಶೈವ ಸಮಾಜದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಿಂದ ತಹಸೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ದೂರ ಉಳಿದರು.

ಪೂರ್ವ ನಿಗದಿಯಂತೆ ಬೆಳಿಗ್ಗೆ ೧೧ ಗಂಟೆಗೆ ವೇದಿಕೆ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಸಮಾಜದ ಮುಖಂಡರ ಆಹ್ವಾನದಂತೆ ಶಾಸಕ ಡಿ.ರವಿಶಂಕರ್ ಮತ್ತು ವಿದಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವೇದಿಕೆಯ ಬಳಿ ಬಂದರು. ಅಧಿಕಾರಿಗಳು ಬಸವ ಜಯಂತಿ ಕಾರ್ಯಕ್ರಮಕ್ಕೆ ಬಾರದ ಹಿನ್ನೆಲೆಯಲ್ಲಿ ವೇದಿಕೆಯ ಹಿಂದೆ ತಾಲೂಕು ಆಡಳಿತ ಮತ್ತು ವೀರಶೈವ ಸಂಘಟನೆಗಳ ಆಶ್ರಯದಲ್ಲಿ ಸಮಾರಂಭ ನಡೆಯುತ್ತದೆ ಎಂದು ಹಾಕಿದ್ದ ಪ್ಲೆಕ್ಸ್ ತೆರವು ಮಾಡಲಾಯಿತು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಕಾರ್ಯಕ್ರಮಕ್ಕೆ ಬರಲಿಲ್ಲ ಜತೆಗೆ ಸ್ಥಳದಲ್ಲಿ ಇದ್ದ ತಾ.ಪಂ.ಇಒ ಹೆಚ್.ಕೆ.ಹರೀಶ್, ಸಿಡಿಪಿಒ ಅಣ್ಣಯ್ಯ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಸೆಸ್ಕಾಂ ಎಇ ಪ್ರಸನ್ನ, ಉಪ-ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ದೂರದಲ್ಲಿ ನಿಂತು ಪ್ರಮುಖರ ಬಾಷಣ ಆಲಿಸಿ ನಂತರ ಹೊರಟು ಹೋದರು.

RELATED ARTICLES
- Advertisment -
Google search engine

Most Popular