ಮಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೊಡಗಿನ ಶುಂಠಿ ಕೊಪ್ಪ ನಿವಾಸಿ ಕೀರ್ತನ ಪಿ. ಎಸ್ ಇವರು 593 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಗರ್ಲ್ಸ್ ರೆಸ್ಪಿರೇಷನ್ ಸ್ಕೂಲ್ ತೋಳ್ಳೂರ್ ಶೀತಲಾ ಹಳ್ಳಿ ಸೋಮರ್ಪೇಟೆಯ ವಿದ್ಯಾರ್ಥಿಯಾಗಿರುವ ಇವರು ತಮ್ಮ ವಿದ್ಯಾಭ್ಯಾಸವನ್ನು ಹಾಸ್ಟೆಲ್ ಮೂಲಕವೇ ನಡೆಸಿದ್ದಾರೆ.

ಕ್ರೀಡೆ, ಸಾಂಸ್ಕೃತಿಕ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಕೂಡಾ ಇವ್ರು ಮುಂದಿದ್ದಾರೆ. ಇವರು ಪಿ.ಕೆ.ಸಂತೋಷ್ ಹಾಗೂ ರೀತಾ ದಂಪತಿಯ ಮೊದಲನೇ ಪುತ್ರಿಯಾಗಿದ್ದಾರೆ.