Monday, April 21, 2025
Google search engine

Homeರಾಜ್ಯಸುದ್ದಿಜಾಲಅದ್ವೈತ ಚಿಂತನೆಯ ಮೂಲಕ ಜಗತ್ತಿಗೇ ಚಿಂತನೆ ನೀಡಿದ ಜಗದ್ಗುರು

ಅದ್ವೈತ ಚಿಂತನೆಯ ಮೂಲಕ ಜಗತ್ತಿಗೇ ಚಿಂತನೆ ನೀಡಿದ ಜಗದ್ಗುರು

ಚಾಮರಾಜನಗರ: ಭಾರತದ ವೇದಗಳು, ಉಪನಿಷತ್ತುಗಳು ಪುರಾಣಗಳು , ಮಹಾಕಾವ್ಯಗಳನ್ನು ಸರ್ವ ಜನರಿಗೂ ಅರ್ಥವಾಗುವಂತೆ ವಿವರಿಸಿ ಅದ್ವೈತ ಚಿಂತನೆಯ ಮೂಲಕ ಇಡೀ ಜಗತ್ತಿಗೆ ನೀಡಿದ ಆದಿ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರು ಭಾರತದ ಸನಾತನ ಧರ್ಮವನ್ನು ಪ್ರಜ್ವಲಿಸುವಂತೆ ಮಾಡಿದ ಶ್ರೇಷ್ಠ ಜಗದ್ಗುರುಗಳು ಎಂದು ಸಂಸ್ಕೃತಿ ಚಿಂತಕ ಶ್ರೀ ಶಂಕರ ಅಭಿಯಾನದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್, ಶಂಕರ ತತ್ವ ಪ್ರಚಾರ ಅಭಿಯಾನ, ಶ್ರೀ ಶಾರದಾ ಭಜನಾ ಮಂಡಳಿ ಹಮ್ಮಿಕೊಂಡಿದ್ದ ಶಂಕರೋತ್ಸವ ಆದಿಗುರು ಶ್ರೀ ಶಂಕರಾಚಾರ್ಯ ಜಯಂತಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ೧೩೦೦ ವರ್ಷಗಳ ಹಿಂದೆ ಭಾರತೀಯ ಸನಾತನ ಧರ್ಮ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಜನಿಸಿದ ಶ್ರೀ ಶಂಕರರು ತಮ್ಮ ೩೨ ವರ್ಷಗಳಲ್ಲೇ ಅದ್ವಿತೀಯ ಸಾಧನೆಯನ್ನು ಮಾಡಿ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಠಗಳನ್ನು ಸ್ಥಾಪನೆ ಮಾಡಿ ಚತುರ್ವೇದಗಳನ್ನು ಪುನಃ ಸ್ಥಾಪಿಸಿ ಭಾರತೀಯ ಸನಾತನ ಧರ್ಮ ಶಾಶ್ವತವಾಗಿ ಉಳಿಯುವಂತೆ ಹಾಗೂ ಅದರ ಅರ್ಥವನ್ನು ಪ್ರತಿಯೊಬ್ಬರಿಗೂ ವಿವರಿಸಿ , ಪರಿಶುದ್ಧವನ್ನಾಗಿ ಮಾಡಿ ಅದ್ವೈತ ತತ್ವವನ್ನು ತಿಳಿಸಿದ್ದಾರೆ.

ಅದ್ವೈತ ತತ್ವವು ವಿಶ್ವ ಮಾನ್ಯ ವಾಗಿದ್ದು , ಪ್ರತಿ ಕ್ಷೇತ್ರದಲ್ಲೂ ಅದ್ವೈತ ತತ್ವದ ಚಿಂತನೆಗಳು ಅರಳಿವೆ . ಮನೆಮನೆಗಳಲ್ಲೂ ಶಂಕರಾಚಾರ್ಯರ ಅದ್ವೈತ ಚಿಂತನೆಗಳನ್ನು ತಿಳಿಸುವ ಕಾರ್ಯವನ್ನು ಶ್ರೀಶಂಕರ ತತ್ವ ಪ್ರಸಾರ ಅಭಿಯಾನ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳು ಮಹಿಳೆಯರು ಹಾಗೂ ವಿಶೇಷವಾಗಿ ಯುವಕರು ಅದ್ವೈತ ಚಿಂತನೆಯ ಸಾರವನ್ನು ತಿಳಿದು ಜೀವನವನ್ನು ಪರಿಪೂರ್ಣಗೊಳಿಸಿಕೊಂಡು ಶ್ರೇಷ್ಠರಾಗಬೇಕಾಗಿದೆ. ಶೃಂಗೇರಿ ,ಪುರಿ ,ದ್ವಾರಕ ಮತ್ತು ಕೇದಾರನಾಥ ಮಠಗಳು ಶಂಕರರ ತತ್ವಗಳನ್ನು ಎಲ್ಲೆಡೆ ನಿರಂತರವಾಗಿ ಶ್ರೇಷ್ಠ ಮನಸ್ಸಿನಿಂದ ಜೀವನ ಸಾರ್ಥಕತೆಗೊಳಿಸಿಕೊಳ್ಳಲು ತತ್ವಗಳ ಸಾರವನ್ನು ಅರಿತು ಅದರಂತೆ ಜೀವನ ಕ್ರಮವನ್ನು ರೂಡಿಸಿಕೊಳ್ಳುವ ಚಿಂತನೆ ಅಮೂಲ್ಯವಾದದು. ರಾಜ್ಯದ ಎಲ್ಲೆಡೆ ಶ್ರೀಶಂಕರ ಯುವಜನ ಅಭಿಯಾನವನ್ನು ಆರಂಭಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಶಂಕರೋತ್ಸವ ಕಾರ್ಯಕ್ರಮವನ್ನು ಜೈ ಹಿಂದ್ ಪ್ರತಿಷ್ಠಾನದ ಮಾರ್ಗದರ್ಶಕರಾದ ಗುಂಡ್ಲುಪೇಟೆ ರಮೇಶ್ ರವರು ಉದ್ಘಾಟಿಸಿ ಆಧ್ಯಾತ್ಮ ಚಿಂತನೆಗಳ ಮೂಲಕ ಮಾನವ ತನ್ನ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಇರುವ ಮಾರ್ಗ ಭಗವಂತನ ಸ್ಮರಣೆ. ಶ್ರೀ ಶಂಕರರು ಅದ್ವೈತ ಚಿಂತನೆಯ ಮೂಲಕ ಎಲ್ಲಾ ನೀತಿ ಮಾರ್ಗಗಳನ್ನು ತಿಳಿಸಿದ್ದಾರೆ. ಶಂಕರೋತ್ಸವದ ಮೂಲಕ ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿರುವುದು ಸಂತೋಷ ವೆಂದರು.

ನಿವೃತ್ತ ಮುಖ್ಯ ಶಿಕ್ಷಕಿ ಕೆವಿ ಶ್ರೀಮತಿ ಹಾಗೂ ಕೆ ವಿ ಅನಿತಾ ರವರು ಶ್ರೀ ಶಂಕರರ ಗೀತ ಗಾಯನ ನಡೆಸಿದರು.
ಶ್ರೀ ಶಂಕರ ಅಷ್ಟೋತ್ತರ ಪಾರಾಯಣ ಭಜನೆ ಪೂಜೆ ಹಾಗೂ ಪ್ರವಚನ ಕಾರ್ಯಕ್ರಮ ಜರಗಿತು. ಶ್ರಾವ್ಯ ಋಗ್ವೇದಿ ಹಾಗೂ ಧನುಷ್ ರಾವ್ ರವರ ಸ್ವರಚಿತ ಶ್ರೀ ಶಂಕರಾಚಾರ್ಯರ ಭಾವಚಿತ್ರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಶಾರದಾ ಭಜನಾ ಮಂಡಳಿಯ ಆಶಾ, ಕುಸುಮ ಋಗ್ವೇದಿ , ಋಗ್ವೇದಿ ಯೂತ್ ಕ್ಲಬ್ ಕಾರ್ತಿಕ್ ಸುಪ್ರಿಯಾ,ಸುಹಾಸ್, ಶ್ರಾವ್ಯ, ದಿಲೀಪ್, ಧನುಷ್ ರಾವ್ ಇದ್ದರು.

RELATED ARTICLES
- Advertisment -
Google search engine

Most Popular