Saturday, April 19, 2025
Google search engine

Homeಆರೋಗ್ಯಚಿಯಾ ಬೀಜಗಳ ಸೇವನೆಯಿಂದಾಗುವ ಪ್ರಯೋಜನಗಳು

ಚಿಯಾ ಬೀಜಗಳ ಸೇವನೆಯಿಂದಾಗುವ ಪ್ರಯೋಜನಗಳು

ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜವಿಲ್ಲದೆ ಬೇಸಿಗೆ ಪೂರ್ಣಗೊಳ್ಳುವುದಿಲ್ಲ. ದೇಹಕ್ಕೆ ತಂಪು ಹಾಗೂ ಆರೋಗ್ಯವನ್ನು ನೀಡುವ ಈ ಬೀಜಗಳನ್ನು ಸಲಾಡ್ ಹಾಗೂ ಪಾನೀಯಗಳಿಗೆ ಬೆರೆಸಿ ಸೇವಿಸಲಾಗುತ್ತದೆ. ಸಾಮಾನ್ಯವಾಗಿ ರಸ್ತೆ ಬದಿಯ ಸಲಾಡ್ ಹಾಗೂ ತಂಪು ಪಾನೀಯಗಳಲ್ಲಿ ಕಾಮಕಸ್ತೂರಿ ಬೀಜಗಳನ್ನು ಬೆರೆಸಲಾಗುತ್ತದೆ.

ಅಧಿಕ ಪ್ರಮಾಣದಲ್ಲಿ ನಾರಿನಾಂಶವನ್ನು ಹೊಂದಿರುವ ಈ ಬೀಜ ಜೀರ್ಣಕ್ರಿಯೆ ಹಾಗೂ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಹಾಗಾದರೆ ಚಿಯಾ ಬೀಜಗಳಿಲ್ಲಿರುವ ಆರೋಗ್ಯಕರ ಪ್ರಯೋಜನಗಳು ಯಾವವು? ಯಾಕೆ ಈ ಬೀಜಗಳನ್ನು ಸೇವಿಸಲಾಗುತ್ತದೆ ಎಂದು ತಿಳಿಯೋಣ. ಚಿಯಾ ಬೀಜಗಳು ಸಾಮಾನ್ಯವಾಗಿ ಆಹಾರ ಧಾನ್ಯಗಳಂತೆ ಇರುತ್ತವೆ. ಪುದೀನಾ ಸಸ್ಯಗಳಂತೆ ಈ ಬೀಜಗಳ ಸಸ್ಯಗಳಿದ್ದು ಇದು ಅಂಡಾಕಾರದಲ್ಲಿರುತ್ತದೆ.

ಕಪ್ಪು ಹಾಗೂ ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಗಾತ್ರದಲ್ಲಿ ಚಿಕ್ಕದಾಗಿ ತೋರುವ ಈ ಬೀಜಗಳು ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿವೆ. ಹಾಗಾದರೆ ಈ ಬೀಜಗಳ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಚಿಯಾ ಬೀಜವನ್ನು ಸೇವಿಸುವುದರಿಂದ ಆಗುವ ಲಾಭಗಳು

1. ಹೃದ್ರೋಗದ ಅಪಾಯ ಕಡಿಮೆ

ನಿಮ್ಮ ದೈನಂದಿನ ಆಹಾರದಲ್ಲಿ ಕಾಮಕಸ್ತೂರಿ ಬೀಜಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ನಿರ್ದಿಷ್ಟವಾಗಿ, ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ದೇಹದ ಅಂಗಾಂಗಗಳ ಉರಿಯೂತ ಕಡಿಮೆಯಾಗುತ್ತದೆ. HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ದೇಹಕ್ಕೆ ಒಳ್ಳೆಯದಾಗಿದೆ.

2. ಆರೋಗ್ಯಕರ ಕೂದಲು

ದೇಹದ ಆರೋಗ್ಯ ಅಷ್ಟೇ ಅಲ್ಲದೇ, ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಈ ಬೀಜಗಳನ್ನು ಬಳಸಬಹುದು. ಇದರ ಸೇವನೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ಕೂದಲು ನಯಾವಾಗಿ ಹಾಗೂ ಶೈನ್ ಆಗುತ್ತದೆ. ಮಾತ್ರವಲ್ಲದೆ ಇದು ಕೂದಲ ಉದುರುವಿಕೆ ತಡೆಯುತ್ತದೆ.

3. ಮೂಳೆಗಳಲ್ಲಿ ಬಲ

ಕಾಮಕಸ್ತೂರಿ ಬೀಜಗಳು ನಮ್ಮ ಮೂಳೆಗಳನ್ನು ಬಲಪಡಿಸುವ ಕ್ಯಾಲ್ಸಿಯಂ, ಪ್ರೊಟೀನ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಡೈರಿ ಉತ್ಪನ್ನಗಳನ್ನು ತ್ಯಜಿಸುವವರಿಗೆ ಕ್ಯಾಲ್ಸಿಯಂ ಸಹಾಯಕವಾಗಿದೆ.ಇನ್ನೂ ಸುಮಾರು 92 ಪ್ರತಿಶತ ಕಾಮಕಸ್ತೂರಿ ಬೀಜಗಳು ಫೈಬರ್‌ನಿಂದ ಕೂಡಿದೆ. ಇದು ನಮ್ಮ ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ.

4. ಗುಣಮಟ್ಟದ ಪ್ರೋಟೀನ್

ಚಿಯಾ ಬೀಜಗಳಲ್ಲಿನ ಆಂಟಿಆಕ್ಸಿಡೆಂಟ್‌ಗಳ ಪಾತ್ರ ದೇಹದ ಜೀವಕೋಶಗಳ ಮೇಲೆ ದಾಳಿ ಮಾಡುವ ಸೂಕ್ಷ್ಮಾಣುಗಳನ್ನು ಕೊಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ವಯಸ್ಸಾಗುವುದನ್ನು ತಡೆಯುತ್ತದೆ. ಈ ಬೀಜಗಳಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್‌ ಸಮೃದ್ಧವಾಗಿದೆ. ಆದ್ದರಿಂದ ನಾವು ಇದನ್ನು ಹೆಚ್ಚು ತೆಗೆದುಕೊಂಡಾಗ ನಮಗೆ ಹಸಿವು ಕಾಣಿಸುವುದಿಲ್ಲ. ಹೀಗಾಗಿ ತಡರಾತ್ರಿ ಹಸಿವು ಅಥವಾ ತಿಂಡಿ ತಿನ್ನುವ ಬಯಕೆಯನ್ನು ನಿಯಂತ್ರಿಸಲಾಗುತ್ತದೆ.

5. ಪೋಷಕಾಂಶಗಳಿಂದ ಸಮೃದ್ಧ

ಚಿಯಾ ಬೀಜಗಳು 11 ಗ್ರಾಂ ಫೈಬರ್, 4 ಗ್ರಾಂ ಪ್ರೊಟೀನ್ ಮತ್ತು 5 ಗ್ರಾಂ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿವೆ. ಇದಲ್ಲದೆ 18 ಪ್ರತಿಶತ ಕ್ಯಾಲ್ಸಿಯಂ, 30 ಪ್ರತಿಶತ ಮೆಗ್ನೀಸಿಯಮ್ ಮತ್ತು 27 ಪ್ರತಿಶತ ರಂಜಕವಿದೆ. ಇದು ಕೇವಲ 137 ಕ್ಯಾಲೋರಿಗಳನ್ನು ಹೊಂದಿದೆ.

6. ದೇಹದ ತೂಕ ಕಡಿಮೆ

ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಜೊತೆಗೆ ಕುಸುಬೆ ಬೀಜಗಳಂತೆ, ಚಿಯಾ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಅವು ದೇಹಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇದು ಬೇಸಿಗೆಯಲ್ಲಿ ನಮ್ಮ ದೇಹವನ್ನು ಹೈಡ್ರೇಟ್ ಮತ್ತು ತಂಪಾಗಿರಿಸಲು ಸಹಾಯ ಮಾಡುತ್ತದೆ. ಈ ಬೀಜಗಳ ಸೇವನೆಯು ಪಿತ್ತರಸವನ್ನು ಕಡಿಮೆ ಮಾಡುತ್ತದೆ ಮತ್ತು ನೀರಿನ ಅಂಶ ಹೆಚ್ಚಿಸುತ್ತದೆ ಎಂದು ಆಯುರ್ವೇದ ಔಷಧ ಹೇಳುತ್ತದೆ.

7. ಮಧುಮೇಹಕ್ಕೆ ಚಿಯಾ ಬೀಜಗಳಿಂದ ಪರಿಹಾರ

ಚಿಯಾ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಮೆಗ್ನೀಸಿಯಮ್ಗಳ ಉತ್ತಮ ಮೂಲವಾಗಿದೆ. ಈ ಎಲ್ಲಾ ಪೋಷಕಾಂಶಗಳು ಟೈಪ್ 2 ಮಧುಮೇಹದ ತೊಡಕುಗಳ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ. “ಸಮತೋಲಿತ ಆಹಾರದೊಂದಿಗೆ ಈ ಬೀಜಗಳ ನಿಯಮಿತ ಸೇವನೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳುವುದು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ” ಎಂದು ತಜ್ಞರು ಹೇಳಿದರು.

ಚಿಯಾ ಬೀಜಗಳು ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?

ನೀವು ಆರೋಗ್ಯಕರ, ಹೊಳೆಯುವ ಮತ್ತು ಕಾಂತಿಯುತ ಚರ್ಮವನ್ನು ಹೊಂದಿರುವಾಗ ಮಾತ್ರ ನೀವು ಆತ್ಮವಿಶ್ವಾಸದಿಂದ ಜಗತ್ತನ್ನು ಗೆಲ್ಲುತ್ತೀರಿ. ಹೆಚ್ಚು ಹೆಚ್ಚು ಜನರು ಪ್ರಕೃತಿ ಆಧಾರಿತ ತ್ವಚೆ ಉತ್ಪನ್ನಗಳತ್ತ ಸಾಗುತ್ತಿದ್ದಾರೆ. ನೀವು ಈ ವರ್ಗದ ಜನರಿಗೆ ಸೇರಿದವರಾಗಿದ್ದರೆ, ನೀವು ಸರಿಯಾದ ಮಾರ್ಗದಲ್ಲಿದ್ದೀರಿ ಎಂದರ್ಥ. ಪೌಷ್ಟಿಕಾಂಶ-ಪ್ಯಾಕ್ಡ್ ಈ ಬೀಜಗಳನ್ನು ಸೇವಿಸುವುದು ನಿಮ್ಮ ಚರ್ಮಕ್ಕೆ ಸಹಕಾರಿಯಾಗಿದೆ. ಏಕೆಂದರೆ ಅವುಗಳು ಅಗತ್ಯವಾದ ಜೀವಸತ್ವಗಳು, ಕ್ಯಾಲ್ಸಿಯಂ, ಖನಿಜಗಳು, ಉತ್ಕರ್ಷಣ ನರೋಧಕಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಪ್ರತಿದಿನ ಕೈಬೆರಳೆಣಿಕೆಯಷ್ಟು ಚಿಯಾ ಬೀಜಗಳನ್ನು ತಿನ್ನುವುದು ಅಥವಾ ಮನೆಯಲ್ಲಿ ತಯಾರಿಸಿದ ಕಾಮಕಸ್ತೂರಿ ಸೀಡ್ಸ್ ಫೇಸ್ ಮಾಸ್ಕ್ ಅನ್ನು ಅನ್ವಯಿಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಚರ್ಮದ ಹೊಳಪನ್ನು ಉಳಿಸುತ್ತದೆ.

ಜೊತೆಗೆ ಈ ಬೀಜಗಳು ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

1. ಸ್ಕಿನ್ ಹೈಡ್ರೇಟೆಡ್

ನೀವು ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ನಿಮ್ಮ ಚರ್ಮವನ್ನು ದಿನವಿಡೀ ತೇವಾಂಶದಿಂದ ಇಡಲು ಮಾಯಿಶ್ಚರೈಸರ್‌ಗಳನ್ನು ಅನ್ವಯಿಸುತ್ತೀರಿ. ಆದರೆ ಈ ಕೆಲಸವನ್ನು ನೈಸರ್ಗಿಕವಾಗಿ ನಿಮ್ಮ ತ್ವಚೆಯಲ್ಲಿ ಕಾಣಲು ಚಿಯಾ ಬೀಜಗಳು ಸಹಕಾರಿಯಾಗಿವೆ. ಇದರಿಂದ ಇವುಗಳ ಸೇವನೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

2. ಸೂರ್ಯನ ಕಿರಣಗಳಿಂದ ಚರ್ಮ ರಕ್ಷಣೆ

ನಿಮ್ಮ ಚರ್ಮವನ್ನು ಟ್ಯಾನಿಂಗ್‌ನಿಂದ ರಕ್ಷಿಸಲು UV ಕಿರಣಗಳನ್ನು ನಿರ್ಬಂಧಿಸಲು ಈ ಬೀಜ ಕೆಲಸ ಮಾಡುತ್ತದೆ. ಕಾಮಕಸ್ತೂರಿ ಬೀಜಗಳ ಸೇವನೆಯಿಂದ ಸೂರ್ಯನ ಹಾನಿಯನ್ನು ಶಾಶ್ವತವಾಗಿ ನಿವಾರಣೆ ಮಾಡಬಹುದು. ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಲು ಈ ಬೀಜಗಳನ್ನು ಸೇವಿಸಿ.

3.ನೈಸರ್ಗಿಕ ಎಕ್ಸ್ಫೋಲಿಯೇಟರ್

ಚಿಯಾ ಬೀಜಗಳು ನೈಸರ್ಗಿಕ ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತವೆ. ಅವು ನಿಮ್ಮ ಚರ್ಮಕ್ಕೆ ತೇವಾಂಶವನ್ನು ಒದಗಿಸುವುದರ ಜೊತೆಗೆ ನಿಮ್ಮ ಮುಖದಿಂದ ಮೇದೋಗ್ರಂಥಿಗಳ ಸ್ರಾವ ಮತ್ತು ಕೊಳೆಯನ್ನು ತೆಗೆದುಹಾಕುವುದರ ಜೊತೆಗೆ ನಿಮ್ಮ ಚರ್ಮವನ್ನು ತಾಜಾ ಮತ್ತು ಸ್ವಚ್ಛವಾಗಿಡುತ್ತವೆ.

4. ಮೊಡವೆಗಳಿಗೆ ರಾಮಬಾಣ

ಅತ್ಯುತ್ತಮ ಫೇಸ್ ವಾಶ್, ಸೀರಮ್ ಮತ್ತು ಫೇಸ್ ಪ್ಯಾಕ್ ಬಳಸಿದ ನಂತರವೂ ನೀವು ಮೊಡವೆಗಳೊಂದಿಗೆ ಹೋರಾಡುತ್ತಿದ್ದೀರಾ? ಇದಕ್ಕೆ ಕಾಮಕಸ್ತೂರಿ ಬೀಜಗಳಿಂದ ಮುಕ್ತಿ ಸಿಗಬಹುದು. ಈ ಬೀಜಗಳು ಮೊಡವೆ ಹೋಗಲಾಡಿಸಲು ಸಹಕಾರಿಯಾಗಿವೆ. ಈ ಬೀಜಗಳ ಸಮೃದ್ಧ ಪೌಷ್ಟಿಕಾಂಶವನ್ನು ಹೊಂದಿದ್ದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.

5. ಕಪ್ಪು ಕಲೆಗಳ ನಿವಾರಣೆ

ಚಿಯಾ ಬೀಜಗಳು ವಿಟಮಿನ್ ಎ ಮತ್ತು ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿರುವುದರಿಂದ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಈ ಪೋಷಕಾಂಶಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ. ಕಪ್ಪು ಕಲೆಗಳನ್ನು ತೆಗೆದುಹಾಕುತ್ತವೆ ಮತ್ತು ಚರ್ಮದ ಹೊಳಪನ್ನು ಉತ್ತೇಜಿಸುತ್ತವೆ.

ಇದಲ್ಲದೆ ಕಾಮಕಸ್ತೂರಿ ಬೀಜಗಳಲ್ಲಿ ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇದು ಕಪ್ಪು ಕಲೆಗಳನ್ನು ಹಗುರಗೊಳಿಸುತ್ತದೆ ಮತ್ತು ಇತರ ಚರ್ಮದ ಹಾನಿಗಳನ್ನು ಸುಲಭವಾಗಿ ಗುಣಪಡಿಸುತ್ತದೆ.

RELATED ARTICLES
- Advertisment -
Google search engine

Most Popular