ಮಂಡ್ಯ: ಮಂಡ್ಯದಲ್ಲಿ ಬಾರಿ ಬಿರುಗಾಳಿ-ಮಳೆ ಅವಾಂತರ ಸೃಷ್ಠಿಸಿದ್ದು, ಬಿರುಗಾಳಿ ಸಹಿತ ಬಾರಿ ಮಳೆಗೆ ಆಲೆ ಮನೆಯ ಮೇಲ್ಚಾವಣಿ ಮುರಿದ ಬಿದ್ದಿದೆ.
ಆಲೆ ಮನೆಯ ಮೇಲ್ಚಾವಣಿ ಮುರಿದು ಬಿದ್ದ ಹಿನ್ನಲೆ ಮಳೆ ನೀರಿಗೆ ಸಾವಯವ ಬೆಲ್ಲ ಸಂಪೂರ್ಣ ನಾಶವಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಬಿಳಿದೇಗುಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೆಂಕಟೇಶ್ ಎಂಬುವವರಿಗೆ ಸೇರಿದ ಆಲೆಮನೆ ಮೇಲ್ಛಾವಣಿ ಹಾರಿಹೋಗಿದ್ದು, ಸುಮಾರು 15ಲಕ್ಷ ವೆಚ್ಚದ 15ಕ್ಕು ಹೆಚ್ಚು ಟನ್ ಬೆಲ್ಲ ಮಳೆ ನೀರಿನಿಂದ ನಾಶವಾಗಿದೆ.
ಬೆಲ್ಲ ಕಳೆದುಕೊಂಡ ರೈತ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.