ಕೆ.ಆರ್.ಪೇಟೆ : ಸಾಲಬಾಧೆಯಿಂದ ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮನಹಳ್ಳಿ ಗ್ರಾಮದ ನಿವಾಸಿ ರೇವಣ್ಣ (೬೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಮೃತ ರೇವಣ್ಣ ಸೋಮನಹಳ್ಳಿ ಗ್ರಾಮದ ಸರ್ವೆ ನಂಬರ್ ೨೮೪ರಲ್ಲಿ ೧ ಎಕರೆ ಜಮೀನು ಹೊಂದಿದ್ದು, ಸಾಲ ಮಾಡಿ ಒಂದು ತಿಂಗಳ ಹಿಂದೆ ಹೊಲದಲ್ಲಿ ಕೊಳವೆ ಬಾವಿ ಕೊರೆಸಿ ನೀರು ಬಾರದ ಕಾರಣ ಮನನೊಂದಿದ್ದರು. ಅಲ್ಲದೇ ಜನರ ಹತ್ತಿರ ಕೈಸಾಲ, ಧರ್ಮಸ್ಥಳ ಸಂಘದಲ್ಲಿ ಸಾಲ, ಸೊಸೈಟಿ ಸೇರಿ ಲಕ್ಷಾಂತರ ರೂ. ಸಾಲ ಮಾಡಿದ್ದರು.
ಮರ್ಯಾದೆಗೆ ಅಂಜಿ ಸಾಲಕ್ಕೆ ಹೆದರಿ ಜಮೀನಿನ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಎಂದು ಮೃತರ ಮಗ ಎಸ್.ಆರ್.ಸಂತೋಷ್ ದೂರು ನೀಡಿದ್ದಾರೆ.