Monday, April 21, 2025
Google search engine

Homeಸ್ಥಳೀಯದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಸ್ವಾಸ್ಥ್ಯವೇ ನಿಜವಾದ ಆರೋಗ್ಯ: ಡಾ. ಹೆಚ್. ಬಸವನಗೌಡಪ್ಪ

ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಸ್ವಾಸ್ಥ್ಯವೇ ನಿಜವಾದ ಆರೋಗ್ಯ: ಡಾ. ಹೆಚ್. ಬಸವನಗೌಡಪ್ಪ

ಮೈಸೂರು: ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡರೆ ಅದೇ ನಿಜವಾದ ಆರೋಗ್ಯ ಎಂದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಬಸವನಗೌಡಪ್ಪನವರು ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್‌ ಆಶ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರವನ್ನು ಉದ್ಘಾಟಿಸಿ ಆರೋಗ್ಯ ಮತ್ತುಜೀವನಶೈಲಿ ಕುರಿತುಉಪನ್ಯಾಸ ನೀಡುತ್ತಾ ತಿಳಿಸಿದರು.

ಮನುಷ್ಯನಿಗೆ ರೋಗಗಳು ವಂಶವಾಹಿ, ಪರಿಸರ ಮಾಲಿನ್ಯ, ವಿಷಜಂತು, ಜೀವನಶೈಲಿಗಳಿಂದ ಬರುತ್ತವೆ. ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗ ತೊಂದರೆಗಳುಜೀವನಶೈಲಿಯಿಂದ ಬರುತ್ತವೆ. ದೈಹಿಕಚಟುವಟಿಕೆ, ಆಹಾರ ಪದ್ಧತಿ, ನಿದ್ರೆ, ಹವ್ಯಾಸಗಳ ಮೂಲಕ ಆರೋಗ್ಯದಿಂದರಲು ಸಾಧ್ಯ.ದಿನಕ್ಕೆ ಅರ್ಧಗಂಟೆ ವ್ಯಾಯಾಮ, ಹಸಿವಾದಾಗ ಊಟ ಮಾಡುವುದು.ಚೆನ್ನಾಗಿ ನಿದ್ರಿಸುವುದು.ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿರುವುದು. ಯೋಗ, ಪ್ರಾಣಾಯಾಮಗಳನ್ನು ಮಾಡುವುದು. ದುಶ್ಚಟಗಳಿಂದದೂರ ಉಳಿದು, ವರ್ತಮಾನದಲ್ಲಿಉತ್ತಮಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು. ಸದಾಧನಾತ್ಮಕ ಚಿಂತನೆಯಲ್ಲಿದ್ದರೆ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ ಎಂದು ಹೇಳಿದರು.

ಕರ್ನಾಟಕರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಜಿ. ಮಲ್ಲೇಶ್‌ರವರು ಪರಿಸರ ಅಸಮತೋಲನಕ್ಕೆ ಅರಣ್ಯನಾಶವೇಕಾರಣ.ಯಾವುದೇಕಾರಣಕ್ಕೂಅರಣ್ಯ ಮತ್ತುಅರಣ್ಯದ ಪ್ರಾಣಿಗಳನ್ನು ನಾಶಮಾಡಬಾರದು. ಅರಣ್ಯನಾಶವಾದರೆ ನಾಡೇ ನಾಶವಾಗುತ್ತದೆ.ಬಿಳಿಗಿರಿರಂಗನಬೆಟ್ಟವು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಪರ್ಕ ಸೇತುವೆಯಾಗಿದೆ.ಇಲ್ಲಿ ಆರುರೀತಿಯ ಕಾಡುಗಳಿರುವುದು ವಿಶೇಷ. ಹುಲಿ, ಆನೆ, ಜಿಂಕೆಗಳಂತಹ ಪ್ರಾಣಿಗಳಿರುವ ಈ ಬೆಟ್ಟವನ್ನು ಹುಲಿಸಂರಕ್ಷಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ.ಅರಣ್ಯವನ್ನು ಕೃಷಿಭೂಮಿಯನ್ನಾಗಿಸಿದುದೇ ಮಾನವ-ಮೃಗಗಳ ನಡುವಿನ ಸಂಘರ್ಷಕ್ಕೆಕಾರಣವಾಗಿದೆಎಂದು ತಿಳಿಸಿದರು.

ಜಾನಪದ ವಿದ್ವಾಂಸರಾದಡಾ. ಜಯಲಕ್ಷ್ಮೀ ಸೀತಾಪುರರವರು ಕರ್ನಾಟಕದಮೂಲ ಸಂಸ್ಕೃತಿಯುಜನಪದ ಸಂಸ್ಕೃತಿಯಗಿದೆ.ನಮ್ಮ ನಡುವಿನ ಸೌಹಾರ್ದವೇ ನಮ್ಮ ಸಂಸ್ಕೃತಿಯಾಗಿದೆ.ಕನ್ನಡಿಗರದ್ದು ಸಹಕಾರ ಸಂಸ್ಕೃತಿ. ಹೀಗಾಗಿಯೇ ಕನ್ನಡ ಸಂಸ್ಕೃತಿ ಮಾದರಿಯಾದುದಾಗಿದೆಎಂದು ಹೇಳಿದರು.

ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಪಾಲ್ಗೊಂಡಿದ್ದರು.ಸಂಜೆ ದೇಸಿ ಆಟಗಳನ್ನು ಆಡಿದರು.ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕಕಾರ್ಯಕ್ರಮ ನೀಡಿದರು.ಶಿಬಿರದಲ್ಲಿ ತುಮಕೂರು, ಬೆಳಗಾವಿ, ಬೆಂಗಳೂರು, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ೭೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular