Saturday, April 19, 2025
Google search engine

Homeರಾಜಕೀಯಪ್ರಜ್ವಲ್​ ರೇವಣ್ಣ ಪ್ರಕರಣ: ನಾನು ಜಸ್ಟ್ ಎಕ್ಸಿಬಿಟರ್, ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ- ಡಿ...

ಪ್ರಜ್ವಲ್​ ರೇವಣ್ಣ ಪ್ರಕರಣ: ನಾನು ಜಸ್ಟ್ ಎಕ್ಸಿಬಿಟರ್, ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ- ಡಿ ಕೆ ಶಿವಕುಮಾರ್

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್ಯದ ಮಹಾನಾಯಕ, ತಿಮಿಂಗಿಲಿನ ಕೈವಾಡವಿದೆ ಅಂತ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಡಿಕೆ ಶಿವಕುಮಾರ್, ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಹೆಸರು ಹೇಳಿದರೆ ಮೀಡಿಯಾದಲ್ಲಿ ಹಾಕುತ್ತಾರೆ ಅಂತ ಮಾತನಾಡುತ್ತಾರೆ. ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ. ನಾನು ಜಸ್ಟ್ ಎಕ್ಸಿಬಿಟರ್, ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ ಎಂದು ಹೇಳಿದರು.

ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ನನಗೆ ನರೇಟಿವ್ ಬದಲಾಯಿಸುವ ಅವಶ್ಯಕತೆ ಕೂಡ ಇಲ್ಲ. ಅವರದ್ದು ದೊಡ್ಡ ಕುಟುಂಬ, ಹೀಗೆಲ್ಲ ಆಗಬಾರದಿತ್ತು ಅಂತ ನನಗೂ ಬೇಸರವಿದೆ, ನೋವಿದೆ. ಐ ಫೀಲ್ ಸಾರಿ ಫಾರ್ ಹಿಮ್ ಎಂದು ಹೆಚ್​ಡಿ ರೇವಣ್ಣ ಅವರ ಬಂಧನ ವಿಚಾರವಾಗಿ ಮಾತನಾಡಿದರು.

ನಾನು ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ನನಗೆ ಸಂಬಂಧವೂ ಇಲ್ಲ. ನಾನೂ ಇದನ್ನೆಲ್ಲ ಅನುಭವಿಸಿಯೇ ಬಂದಿದ್ದೇನೆ. ನಾನು ಕಷ್ಟಪಟ್ಟರೂ, ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಅದಕ್ಕಾಗಿಯೇ ದೇವರು ನನ್ನ ರಕ್ಷಣೆಗೆ ಇದ್ದಾನೆ. ಇದೆಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ. ಆದರೆ ನನ್ನ ಬ್ರದರ್ ಕುಮಾರಣ್ಣನಿಗೆ ಮಾತ್ರ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದರು.

ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಉತ್ತರ ಪ್ರದೇಶದ ರಾಯ್​ಬರೇಲಿಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಇರುವುದಿಲ್ಲ. ಇಂಡಿಯಾ ಮೈತ್ರಿಕೂಟ ಗೆದ್ದು ಸರ್ಕಾರ ರಚನೆ ಮಾಡುತ್ತದೆ. ಮಹಾರಾಷ್ಟ್ರದ ಸರ್ಕಾರವೇ ಬದಲಾವಣೆ ಆಗುತ್ತೆಂದು ಅನಿಸುತ್ತೆ ಎಂದು ಹೇಳಿದ್ದಾರೆ.

ಅಂಕಿತಾಗೆ ಸನ್ಮಾನ

ಸುದ್ದಿಗೋಷ್ಠಿಗೂ ಮುನ್ನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ಕಾರಿ ಶಾಲೆಯಲ್ಲಿ ಓದಿ ಎಸ್ ​ಎಸ್ ​ಎಲ್​ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿ ಅಂಕಿತಾ ಅವರಿಗೆ ಸನ್ಮಾನಿಸಿದರು. ಅಲ್ಲದೆ ಐದು ಲಕ್ಷ ರೂ. ಬಹುಮಾನ ನೀಡಿದರು.

RELATED ARTICLES
- Advertisment -
Google search engine

Most Popular